(ನ್ಯೂಸ್ ಕಡಬ) newskadaba.com ಮಂಗಳೂರು, ಜು. 30. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ 18 ಶಾಖಾಧಿಕಾರಿ ಹುದ್ದೆಗಳಿಗೆ ಉಳಿದ ಮೂಲ ವೃಂದದಡಿಯಲ್ಲಿ ಮತ್ತು 2 ಶಾಖಾಧಿಕಾರಿ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ವೃಂದದಡಿಯಲ್ಲಿ ನೇರ ನೇಮಕಾತಿಗಾಗಿ ಅರ್ಹತೆಯನ್ನು ನಿಗದಿಪಡಿಸಿರುವ ಅಗತ್ಯ ಮತ್ತು ಇತರ ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದೆಂದು ಅಧಿಸೂಚಿಸಲಾಗಿದೆ.
ಖಾಲಿ ಹುದ್ದೆಗಳ ವರ್ಗೀಕರಣ, ವೇತನ ಶ್ರೇಣಿ, ನೇಮಕಾತಿ ವಿಧಾನ, ಸ್ಪರ್ಧಾತ್ಮಕ ಪರೀಕ್ಷೆ ಸಂದರ್ಶನ, ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಸೇವಾ ಪರಿವೀಕ್ಷಣಾ ಅವಧಿ, ಆಯ್ಕೆ ವಿಧಾನ, ಸಾಮಾನ್ಯ ಸೂಚನೆಗಳು, ಅರ್ಹತಾ ಮಾನದಂಡಗಳು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ, ಮೀಸಲಾತಿ ಇತ್ಯಾದಿಗಳ ಕುರಿತು ಹೆಚ್ಚಿನ ವಿವರಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್ https://cetonline.karnataka.gov.in/kea/indexnew ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವೆಬ್‍ಸೈಟ್ https://karnataka.nalsa.gov.in ಅಥವಾ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವೆಬ್‍ಸೈಟ್ https://dk.dcourts.gov.in ನಲ್ಲಿ ನೀಡಲಾದ ವಿವರವಾದ ಮಾಹಿತಿಯನ್ನು ನೋಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.












