ಆಲಂಕಾರು: ಜಾಗದ ತಕರಾರಿನ ಹಿನ್ನೆಲೆಯಲ್ಲಿ ವ್ಯಕ್ತಿಗೆ ಹಲ್ಲೆ



(ನ್ಯೂಸ್ ಕಡಬ) newskadaba.com ಕಡಬ, ಮೇ.31. ಜಾಗದ ತಕರಾರಿಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಗುರುವಾರದಂದು ಅಲಂಕಾರಿನಲ್ಲಿ ನಡೆದಿದೆ.







ಆಲಂಕಾರು ನಿವಾಸಿ ಸಂದೀಪ್ ಭಟ್ ಹಾಗೂ ಯೋಗೀಶ್ ಆಚಾರ್ಯ ಎಂಬವರ ಮಧ್ಯೆ ಜಾಗದ ಬಗ್ಗೆ ತಕರಾರಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆ ಯೋಗೀಶ್ ಆಚಾರ್ಯರು ಗುರುವಾರದಂದು ಕೆಸಿಬಿ ಮೂಲಕ‌ ಮಣ್ಣು ಅಗೆಯುತ್ತಿದ್ದಾಗ ಸಂದೀಪ್ ಭಟ್ ಆಕ್ಷೇಪಿಸಿದ್ದಕ್ಕೆ ಯೋಗೀಶ್ ಆಚಾರ್ಯರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಸಂದೀಪ್ ಭಟ್ ರವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂದೀಪ್ ಭಟ್ ನೀಡಿದ ದೂರಿನಂತೆ ಯೋಗೀಶ್ ಆಚಾರ್ಯ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top