ಬಂಟ್ವಾಳ: ಮೊಡಂಕಾಪು ದೇವಸ್ಥಾನದಲ್ಲಿ ಕಳವು — 57,000 ರೂ. ಮೌಲ್ಯದ ಪೂಜಾ ಸಾಮಗ್ರಿಗಳು ಗಾಯಬ್!



(ನ್ಯೂಸ್‌ ಕಡಬ) newskadaba.com,  ಜು.25:  ಬಂಟ್ವಾಳ ತಾಲೂಕಿನ ಮೊಡಂಕಾಪುವಿನ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಖ್ಯ ಪ್ರವೇಶ ದ್ವಾರದ ಬೀಗ ಒಡೆದು ಕಳ್ಳರು ಪುರಾತನ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ.







ಬೆಳ್ಳಿ ವಸ್ತುಗಳು, ಒಂದು ಕಾಣಿಕೆ ಪಾತ್ರೆ, 10 ಸಾಂಪ್ರದಾಯಿಕ ದೀಪಗಳು, 10 ಹಿತ್ತಾಳೆ ಕಲಶಗಳು, 5 ಹಿತ್ತಾಳೆ ತಟ್ಟೆಗಳು, ತಾಮ್ರದ ಹಾಗೂ ಉಕ್ಕಿನ ಪಾತ್ರೆಗಳು ಸೇರಿ ಒಟ್ಟು ₹57,000 ಮೌಲ್ಯದ ಸಾಮಗ್ರಿಗಳು.ಮೂವರು ಕಳ್ಳರು ಕದ್ದ ವಸ್ತುಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿರುವ ದೃಶ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.






ಸುನೀಲ್ ಕುಮಾರ್ ಕೆ.ಎನ್. ನೀಡಿದ ದೂರಿನನ್ವಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

error: Content is protected !!
Scroll to Top