ಭಾರತದ ಮೇಲೆ 10% ಸುಂಕ ಹೇರಿದ ಟ್ರಂಪ್ 60 ದೇಶಗಳ ವಿರುದ್ಧ ಹೊಸ ತೆರಿಗೆ ಅಸ್ತ್ರ!



(ನ್ಯೂಸ್ ಕಡಬ) newskadaba.com ಜು. 24. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುಂಕ ಸಮರದ ನೀತಿಯನ್ನು ಮುಂದುವರಿಸಿದ್ದು, ಭಾರತ, ಚೀನಾ ಹಾಗೂ ಬ್ರಿಟನ್ ಸೇರಿದಂತೆ 60 ದೇಶಗಳ ಆಮದು ಸರಕುಗಳ ಮೇಲೆ ಹೊಸದಾಗಿ ಸುಂಕ ವಿಧಿಸಿದ್ದಾರೆ.







ಬಲವಂತದ ಕಾರ್ಮಿಕ ಪದ್ಧತಿಯನ್ನು (Forced Labor) ತಡೆಯಲು ಸೂಕ್ತ ಕಾನೂನು ಜಾರಿಗೆ ತಂದಿಲ್ಲ ಎಂದು ಆರೋಪಿಸಿ ಕ್ರಮ ಕೈಗೊಳ್ಳಲಾಗಿದೆ. ದೇಶಗಳಿಂದ ಬರುವ ಸರಕುಗಳ ಮೇಲೆ ಶೇ. 10 ರಿಂದ ಶೇ. 12.5 ರಷ್ಟು ತೆರಿಗೆ ವಿಧಿಸಲಾಗಿದೆ. ಬಲವಂತದ ಶ್ರಮ ನಿಷೇಧಿಸುವ ಸೂಕ್ತ ಕಾನೂನು ಇಲ್ಲದ ಚೀನಾ, ಜಪಾನ್ ಮುಂತಾದ ದೇಶಗಳಿಗೆ ಶೇ. 12.5 ತೆರಿಗೆ ಹೇರಲಾಗಿದೆ. ಇಂತಹ ನಿಯಮ ಹೊಂದಿರುವ ಅಥವಾ ಜಾರಿಗೆ ಒಪ್ಪಿರುವ ಭಾರತ, ಶ್ರೀಲಂಕಾ ಮತ್ತು ಯುರೋಪಿಯನ್ ಯೂನಿಯನ್ ದೇಶಗಳಿಗೆ ಶೇ. 10 ತೆರಿಗೆ ಅನ್ವಯವಾಗಲಿದೆ. (ಇದರಿಂದ ಭಾರತದ ಮೇಲಿನ ಒಟ್ಟಾರೆ ಸುಂಕ ಶೇ. 10 ರಷ್ಟೇ ಇರಲಿದೆ).






ಯುಎಸ್ಮೆಕ್ಸಿಕೋಕೆನಡಾ ಒಪ್ಪಂದದ ವ್ಯಾಪ್ತಿಯ ಉತ್ಪನ್ನಗಳು ಹಾಗೂ ತೈಲ ಮತ್ತು ನೈಸರ್ಗಿಕ ಅನಿಲ ಆಮದುಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಹೊಸ ಸುಂಕ ನೀತಿಯು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

error: Content is protected !!
Scroll to Top