(ನ್ಯೂಸ್ ಕಡಬ) newskadaba.com ಜು. 23. ಜಿ.ಟಿ.ಟಿ.ಸಿ ಡಿಪ್ಲೊಮೊ ಕಾಲೇಜಿನಲ್ಲಿ 2026-27ನೇ ಸಾಲಿನ “ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ” ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಒಂದು ವರ್ಷದ ಟೂಲ್ ರೂಮ್ ಮೆಶಿನಿಷ್ಟ್ ಮತ್ತು ನಾಲ್ಕು ತಿಂಗಳ ಸರ್ಟಿಫಿಕೆಟ್ ಕೋರ್ಸ್ ಗಳಾದ ಸಿ.ಎನ್.ಸಿ. ಪ್ರೊಗ್ರಾಮರ್, ಲೇತ್ ಆಪರೇಟರ್, ಮಿಲ್ಲಿಂಗ್ ಮೆಶಿನ್ ಆಪರೇಟರ್, ಸರ್ಫೇಸ್ ಗ್ರೈಂಡಿಂಗ್ ಆಪರೇಟರ್ ಮತ್ತು ಮೆಕಾನಿಕಲ್ ಡಿಸೈನರ್ನಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಎಲ್ಲಾ ಕೋರ್ಸ್ ಗಳಿಗೆ ಎಸ್ಎಸ್ಎಲ್ಸಿ/ ಐಟಿಐ/ ಡಿಪ್ಲೊಮಾ/ ಬಿ.ಇ ಆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಈ ಕೋರ್ಸ್ ಗಳು ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.2500 ಸ್ಟೈಫಂಡ್ ನೀಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಜಿ.ಟಿ.ಟಿ.ಸಿ ಸಂಸ್ಥೆಯನ್ನು (ದೂ. ಸಂಖ್ಯೆ : 0824-2408003, 8073208137, 7899070548, 9481265587) ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









