ಚೊಕ್ಕಬೆಟ್ಟು ಮಠದ ಬಳಿ ಕಾರ್ಮಿಕನ ನಿಗೂಢ ಮೃತ್ಯು : ತೀವ್ರಗೊಂಡ ತನಿಖೆ, ಇಬ್ಬರ ವಿಚಾರಣೆ

(ನ್ಯೂಸ್‌ ಕಡಬ) newskadaba.com,  ಜು.20 : ಸುರತ್ಕಲ್‌ನ ಚೊಕ್ಕಬೆಟ್ಟು ಮಠದ ಸಮೀಪವಿರುವ ಬಾಡಿಗೆ ಮನೆಯ ಬಾವಿಯಲ್ಲಿ ಕಾರ್ಮಿಕ ಮಲ್ಲಿಕಾರ್ಜುನ ಅವರ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನೊಂದಿಗೆ ವಾಸವಾಗಿದ್ದ ಆತನ ಅಣ್ಣ ಸೋಮನಾಥ್ (21) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತನೇ ಪ್ರಮುಖ ಶಂಕಿತನೆಂದು ತಿಳಿದುಬಂದಿದೆ.

ತನಿಖೆಯ ಭಾಗವಾಗಿ ಪಕ್ಕದ ಮನೆಯ ಮತ್ತೋರ್ವ ಯುವಕನನ್ನೂ ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ವೈಷಮ್ಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Scroll to Top