(ನ್ಯೂಸ್ ಕಡಬ) newskadaba.com, ಜು.20 ಕಡಬ: ಕಳಾರ ಅಡ್ಕಾಡಿ ನಿವಾಸಿ ಮುಹಮ್ಮದ್ ಅಕ್ಬರ್ (21) ಎಂಬ ಯುವಕ ಜುಲೈ 16ರಿಂದ ನಾಪತ್ತೆಯಾಗಿದ್ದು, ಪತ್ತೆಗಾಗಿ ಕಡಬ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಅಬ್ದುಲ್ ರಶೀದ್ ಅವರ ಪುತ್ರನಾದ ಮುಹಮ್ಮದ್ ಅಕ್ಬರ್, ಜು. 16ರಂದು ಬೆಳಗ್ಗೆ 9:30ಕ್ಕೆ ಉಪ್ಪಿನಂಗಡಿಯ ‘ರಾಯೀನ್ ಬಟ್ಟೆ ಅಂಗಡಿ’ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಸಂಜೆಯಾದರೂ ಅವರು ಮನೆಗೆ ಮರಳಿ ಬಂದಿಲ್ಲ.
ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯುವಕನ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ತಂದೆ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಮಾಹಿತಿಗಾಗಿ ವಿನಂತಿ: ಈ ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯ ಆದಲ್ಲಿ ಸಾರ್ವಜನಿಕರು ತಕ್ಷಣವೇ ಕಡಬ ಪೊಲೀಸ್ ಠಾಣೆಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.









