(ನ್ಯೂಸ್ ಕಡಬ) newskadaba.com, ಜು.16 : ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಒಳಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಮುಂದಿನ ಆರು ತಿಂಗಳೊಳಗೆ ಒಟ್ಟು 72,186 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. 2 ತಿಂಗಳಲ್ಲಿ ಅಧಿಸೂಚನೆ, 4 ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣ ಹಾಗೂ 6 ತಿಂಗಳೊಳಗೆ ನೇಮಕಾತಿ ಪತ್ರ ವಿತರಿಸಲಾಗುವುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸುಮಾರು 40,000 ಹುದ್ದೆಗಳ ನೇಮಕಾತಿ ಉಸ್ತುವಾರಿ ಹೊತ್ತಿದೆ. ವಾರದೊಳಗೆ ಅಬಕಾರಿ ಎಸ್‌ಐ, ಸಾರಿಗೆ ವೆಹಿಕಲ್ ಇನ್ಸ್‌ಪೆಕ್ಟರ್ ಸೇರಿದಂತೆ 8,000 ಹುದ್ದೆಗಳ ನೋಟಿಫಿಕೇಶನ್ ಹೊರಬೀಳಲಿದೆ.ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಭರ್ತಿಗೆ ಶೀಘ್ರದಲ್ಲೇ ಕೆಇಎ ಅಧಿಕೃತ ಅಧಿಸೂಚನೆ ಪ್ರಕಟಿಸಲಿದ್ದು, ವಿಳಂಬ ತಪ್ಪಿಸಲು ಆನ್‌ಲೈನ್ ದಾಖಲೆ ಪರಿಶೀಲನೆಗೆ ಚಿಂತನೆ ನಡೆಸಲಾಗಿದೆ.
2026-27ನೇ ಸಾಲಿನ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ 319 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗಾಗಿ KPSC ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳು | ಕೊನೆಯ ದಿನಾಂಕ |
| ಗ್ರಾಮ ಆಡಳಿತಾಧಿಕಾರಿ (VA) | 572 | ಜುಲೈ 30 |
| ಭೂಮಾಪಕರು | 750 | ಆಗಸ್ಟ್ 7 |
| ವಸತಿ ಶಾಲೆ ಶಿಕ್ಷಕರು | 1074 | ಆಗಸ್ಟ್ 13 |
| ವಿಶೇಷ ಮೀಸಲು ಪೊಲೀಸ್ ಪಡೆ | 2314 | ಆಗಸ್ಟ್ 20 |
💼 ಪ್ರಮುಖ ಇಲಾಖಾವಾರು ಹುದ್ದೆಗಳ ವಿವರ:
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ: 18,595, ಸಾರಿಗೆ ಇಲಾಖೆ: 9,253, ಒಳಾಡಳಿತ (ಪೊಲೀಸ್): 6,959, ಇಂಧನ ಇಲಾಖೆ: 5,613, ಆರ್ಥಿಕ ಇಲಾಖೆ: 3,591 ,ನಗರಾಭಿವೃದ್ಧಿ: 3,275…









