ನೆಲ್ಯಾಡಿ: ನೇಣು ಬಿಗಿಯುವಾಗ ತುಂಡಾದ ಹಗ್ಗ ನೆಲದಲ್ಲಿದ್ದ ಗಾಜಿನ ಚೂರಿಗೆ ಬಿದ್ದು ಯುವಕನ ದುರ್ಮರಣ



(ನ್ಯೂಸ್‌ ಕಡಬ) newskadaba.com,  ಜು.10 ಕಡಬ: ತಾಲೂಕಿನ ನೆಲ್ಯಾಡಿ ಗ್ರಾಮದ ಹೊಸಮನೆ ನಿವಾಸಿ ಸೋಮಶೇಖರ್ ಹೆಚ್‌. (27) ಎಂಬುವರು ತಮ್ಮ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.







ಪ್ರಾಥಮಿಕ ಮಾಹಿತಿಯ ಪ್ರಕಾರ, ಜುಲೈ 9ರ ಮುಂಜಾನೆ ಅವರು ಕೋಣೆಯಲ್ಲಿ ನೇಣು ಬಿಗಿಯಲು ಯತ್ನಿಸಿದಾಗ ಬೈರಾಸು (ಹಗ್ಗ) ತುಂಡಾಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ನೆಲದ ಮೇಲಿದ್ದ ಒಡೆದ ಗಾಜಿನ ಚೂರುಗಳು ಚುಚ್ಚಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಸ್ಥಳೀಯರ ನೆರವಿನಿಂದ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.






error: Content is protected !!
Scroll to Top