(ನ್ಯೂಸ್ ಕಡಬ) newskadaba.com, ಜು.09 ಕೇಂದ್ರ ಲೋಕಸೇವಾ ಆಯೋಗವು (UPSC) ವೈದ್ಯಾಧಿಕಾರಿ, ಡ್ರಗ್ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 450 ವಿವಿಧ ಪ್ರತಿಷ್ಠಿತ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಡ್ರಗ್ ಇನ್ಸ್ಪೆಕ್ಟರ್ (186), ಅಸಿಸ್ಟೆಂಟ್ ಪ್ರೊಫೆಸರ್ (104), ಕಂಪನಿ ಪ್ರಾಸಿಕ್ಯೂಟರ್ (18), ಲೀಗಲ್ ಆಫೀಸರ್ (12), ವೈದ್ಯಾಧಿಕಾರಿ (3) ಹಾಗೂ ಇತರೆ ಆಡಳಿತಾತ್ಮಕ/ತಾಂತ್ರಿಕ ಹುದ್ದೆಗಳು.
ಹುದ್ದೆಗಳಿಗೆ ಅನುಗುಣವಾಗಿ MBBS, B.Pharm, BE/B.Tech, LLB, ಅಥವಾ ಯಾವುದೇ ಮಾನ್ಯತೆ ಪಡೆದ ಪದವಿ/ಸ್ನಾತಕೋತ್ತರ ಪದವಿ.ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ₹25 ಮಾತ್ರ. (SC/ST/PwBD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ).ನೇಮಕಾತಿ ಪರೀಕ್ಷೆ (RT/CRT), ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ.
ಕೊನೆಯ ದಿನಾಂಕ: ಅರ್ಜಿ ಸಲ್ಲಿಸಲು ಜುಲೈ 10, 2026 ಕಡೆಯ ದಿನವಾಗಿದೆ.ಹೆಚ್ಚಿನ ಮಾಹಿತಿಗೆ: ಆಸಕ್ತರು ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.









