ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳ್ಳತನ ಆರೋಪಿ ವಿಟ್ಲ ಪೊಲೀಸರ ವಶಕ್ಕೆ



(ನ್ಯೂಸ್ಕಡಬ) newskadaba.com,  ಜು.08  ವಿಟ್ಲ: ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಜುಲೈ 6ರಂದು ಮಂಗಳೂರಿನಲ್ಲಿ ಬಂಧಿಸಿದ್ದಾರೆ.







ಬೆಳ್ತಂಗಡಿ ನಿವಾಸಿ ರಾಜೇಶ್ (41) ಬಂಧಿತ ಆರೋಪಿ. ಈತನು ವಿಟ್ಲ ಪೊಲೀಸ್ ಠಾಣೆಯ 2018ರ ಕಳ್ಳತನ ಪ್ರಕರಣದ (IPC ಸೆಕ್ಷನ್ 379) ಆರೋಪಿಯಾಗಿದ್ದನು. ವಿಟ್ಲ ಠಾಣೆಯ ಎಎಸ್ಐ ಜಯರಾಮ, ಸಿಪಿಸಿಗಳಾದ ವೆಂಕಪ್ಪ ಹಾಗೂ ಶಿವಾನಂದ ಅವರನ್ನೊಳಗೊಂಡ ತಂಡ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.






error: Content is protected !!
Scroll to Top