‘ಜನಸ್ನೇಹಿ ವೈದ್ಯ’ ಪದವಿನಂಗಡಿಯ ಡಾ. ಭರತ್ ಕುಮಾರ್ ಇನ್ನಿಲ್ಲ



(ನ್ಯೂಸ್‌ ಕಡಬ) newskadaba.com,  ಜು.07 ಬಡ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸೇವೆ ಹಾಗೂ ಔಷಧ ನೀಡುವ ಮೂಲಕ ‘ಜನಸ್ನೇಹಿ ವೈದ್ಯ’ ಎಂದೇ ಪ್ರಸಿದ್ಧರಾಗಿದ್ದ ಪದವಿನಂಗಡಿಯ ಡಾ. ಭರತ್ ಕುಮಾರ್ ಎಂ. ಅವರು ಸೋಮವಾರ (ಜುಲೈ 6) ಬೆಳಗ್ಗೆ ನಿಧನರಾಗಿದ್ದಾರೆ.







ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಪದವಿನಂಗಡಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಇವರು, ಯಾವುದೇ ಸ್ವಾರ್ಥವಿಲ್ಲದೆ ಜನಸಾಮಾನ್ಯರಿಗೆ ಚಿಕಿತ್ಸೆ ನೀಡುತ್ತಿದ್ದರು.ಪದವಿನಂಗಡಿ ಮಾತ್ರವಲ್ಲದೆ ಕೊಂಚಾಡಿ, ಪಚ್ಚನಾಡಿ, ಬೊಂದೇಲ್, ಕಾವೂರು ಹಾಗೂ ದೇರೆಬೈಲ್ ಸೇರಿದಂತೆ ಮಂಗಳೂರಿನ ಸುತ್ತಮುತ್ತಲಿನ ಹಲವು ಪ್ರದೇಶಗಳ ಬಡ ರೋಗಿಗಳಿಗೆ ಇವರು ಆಪ್ತರಾಗಿದ್ದರು.






ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಸಹಸ್ರಾರು ಜನರ ಹೃದಯ ಗೆದ್ದಿದ್ದ ಡಾ. ಭರತ್ ಕುಮಾರ್ ಅವರ ನಿಧನಕ್ಕೆ ಸಾರ್ವಜನಿಕರು ತೀವ್ರ ಕಂಬನಿ ಮಿಡಿದಿದ್ದಾರೆ.

error: Content is protected !!
Scroll to Top