ಆಧಾರ್ ಬಳಕೆದಾರರಿಗೆ ಭರ್ಜರಿ ಕೊಡುಗೆ: ಇನ್ಮುಂದೆ ಮನೆಯಲ್ಲೇ ಕುಳಿತು ಉಚಿತವಾಗಿ ಇಮೇಲ್ ಐಡಿ ಲಿಂಕ್ ಮಾಡಿ!



(ನ್ಯೂಸ್‌ ಕಡಬ) newskadaba.com,  ಜು.04 : ಬಳಕೆದಾರರ ಅನುಕೂಲಕ್ಕಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ  ಹೊಸ ಆಧಾರ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು, ಇದರ ಮೂಲಕ ಸಾರ್ವಜನಿಕರು ನೇರವಾಗಿ ತಮ್ಮ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನವೀಕರಿಸಬಹುದು.







ಜುಲೈ 1, 2026 ರಿಂದ ಜಾರಿಗೆ ಬಂದಿರುವ ಈ ಇಮೇಲ್ ಅಪ್ಡೇಟ್ ಸೌಲಭ್ಯವು ಮುಂದಿನ 6 ತಿಂಗಳವರೆಗೆ ಸಂಪೂರ್ಣ ಉಚಿತವಾಗಿರುತ್ತದೆ.ಇನ್ಮುಂದೆ ಇಮೇಲ್ ನವೀಕರಣಕ್ಕಾಗಿ ಸಾರ್ವಜನಿಕರು ಆಧಾರ್ ಕೇಂದ್ರಗಳಿಗೆ ಭೌತಿಕವಾಗಿ ಭೇಟಿ ನೀಡುವ ಅಗತ್ಯವಿಲ್ಲ.






ಈ ಹೊಸ ಆಧಾರ್ ಆ್ಯಪ್ ಆಂಡ್ರಾಯ್ಡ್ ಮತ್ತು ಆಪಲ್ ಎರಡೂ ಸ್ಟೋರ್‌ಗಳಲ್ಲಿ ಲಭ್ಯವಿದೆ.ಸೇವೆ ಆರಂಭವಾದ ಕೇವಲ ಎರಡೇ ದಿನಗಳಲ್ಲಿ 2.5 ಲಕ್ಷಕ್ಕೂ ಅಧಿಕ ಜನರು ಇದರ ಪ್ರಯೋಜನ ಪಡೆದಿದ್ದಾರೆ.ಆಧಾರ್‌ಗೆ ಇಮೇಲ್ ಲಿಂಕ್ ಮಾಡುವುದರಿಂದ, ನಿಮ್ಮ ಆಧಾರ್ ದೃಢೀಕರಣ ನಡೆದಾಗಲೆಲ್ಲಾ ತಕ್ಷಣವೇ ರಿಯಲ್-ಟೈಮ್ ಇಮೇಲ್ ಅಲರ್ಟ್‌ಗಳು ದೊರೆಯಲಿವೆ.

error: Content is protected !!
Scroll to Top