ಶಿರಾಡಿ ಘಾಟ್‌ನ ಗುಂಡ್ಯ ಬಳಿ ಭೀಕರ ಅಪಘಾತ: ಕಂಟೈನರ್ ಡಿಕ್ಕಿಯಾಗಿ ಕಾರು ಜಖಂ, ಚಾಲಕ ಪ್ರಾಣಾಪಾಯದಿಂದ ಪಾರು!



(ನ್ಯೂಸ್‌ ಕಡಬ) newskadaba.com,  ಜು.04 :ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಕಂಟೈನರ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಜಖಂಗೊಂಡಿದೆ.







ಬೇಲೂರು ತಾಲೂಕಿನ ಸೋಂಪುರ ನಿವಾಸಿ ಹರ್ಷ ಟಿ. ಅವರು ಮಂಗಳೂರಿನಲ್ಲಿ ಓದುತ್ತಿರುವ ತಮ್ಮ ಮಗಳನ್ನು ಕರೆತರಲು ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಗುಂಡ್ಯದ ತಿರುವು ರಸ್ತೆಯಲ್ಲಿ ಕಂಟೈನರ್ ಚಾಲಕನು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ, ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.






ಅಪಘಾತದ ತೀವ್ರತೆಗೆ ಕಾರು ಗಮನಾರ್ಹವಾಗಿ ಹಾನಿಗೊಳಗಾಗಿದ್ದರೂ, ಚಾಲಕ ಹರ್ಷ ಟಿ. ಅವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!
Scroll to Top