ಮೂಡುಬಿದಿರೆಯಲ್ಲಿ ಜೆಸಿಬಿ ಗುತ್ತಿಗೆದಾರನ ಶವ ಪತ್ತೆ: ಮರಣೋತ್ತರ ಪರೀಕ್ಷೆಯ ಬಳಿಕ ನಿಖರ ಕಾರಣ ಲಭ್ಯ



(ನ್ಯೂಸ್‌ ಕಡಬ) newskadaba.com,  ಜು.04 ಮೂಡುಬಿದಿರೆ ಅಲಂಗಾರು ಆಶ್ರಯ ಕಾಲೋನಿ ಸಮೀಪದ ಬಂಗೇರಬೆಟ್ಟು ಎಂಬಲ್ಲಿ ಕಳೆದ ಒಂದು ದಿನದಿಂದ ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ, ಹಿಟಾಚಿ ಹಾಗೂ ಜೆಸಿಬಿ ಗುತ್ತಿಗೆದಾರರಾದ ಕಾರ್ತಿಕ್ ಶೆಟ್ಟಿ (34) ಅವರ ಮೃತದೇಹವು ಶನಿವಾರ ಅವರ ಮನೆಯ ಸಮೀಪದ ಶೆಡ್ ಹೊರಗಡೆ ಪತ್ತೆಯಾಗಿದೆ.







ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹೃದಯಾಘಾತದಿಂದ ಮರಣ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ತಿಳಿದುಬರಬೇಕಿದೆ. ಮೃತರು ಅವಿವಾಹಿತರಾಗಿದ್ದರು.






error: Content is protected !!
Scroll to Top