ಐವಿಎಫ್, ಬಾಡಿಗೆ ತಾಯ್ತನ ಕೇಂದ್ರಗಳಿಗೆ ಕೇಂದ್ರದ ಹೊಸ ಗೈಡ್‌ಲೈನ್ಸ್: ಲೈಸೆನ್ಸ್ ನವೀಕರಣ ಕಡ್ಡಾಯ, ತಪ್ಪಿದರೆ ಭಾರಿ ದಂಡ!



(ನ್ಯೂಸ್‌ ಕಡಬ) newskadaba.com, ಜು.02: ದೇಶಾದ್ಯಂತ ಹೆಚ್ಚುತ್ತಿರುವ ಐವಿಎಫ್ ಮತ್ತು ನೆರವು ಸಂತಾನೋತ್ಪತ್ತಿ ತಂತ್ರಜ್ಞಾನ ಕೇಂದ್ರಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ಎಲ್ಲಾ ಫರ್ಟಿಲಿಟಿ ಕ್ಲಿನಿಕ್‌ಗಳು ಮತ್ತು ವೀರ್ಯ ಬ್ಯಾಂಕುಗಳು ಪ್ರತಿ 5 ವರ್ಷಗಳಿಗೊಮ್ಮೆ ಹಾಗೂ ಸರೊಗಸಿ ಚಿಕಿತ್ಸಾಲಯಗಳು ಪ್ರತಿ 3 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಪರವಾನಗಿ ನವೀಕರಿಸಬೇಕು.







ಲೈಸೆನ್ಸ್ ಅವಧಿ ಮುಗಿಯುವ ಕನಿಷ್ಠ 60 ದಿನಗಳ ಮುಂಚಿತವಾಗಿ ರಾಷ್ಟ್ರೀಯ ART ಮತ್ತು ಸರೊಗಸಿ ನೋಂದಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ.ಹಂತ-1 IVF ಕ್ಲಿನಿಕ್ & ವೀರ್ಯ ಬ್ಯಾಂಕ್: ನವೀಕರಣ ಶುಲ್ಕ ₹25,000. ಗಡುವು ಮೀರಿದರೆ ₹50,000 ದಂಡ..ಹಂತ-2 IVF ಕ್ಲಿನಿಕ್: ನವೀಕರಣ ಶುಲ್ಕ ₹1 ಲಕ್ಷ. ವಿಳಂಬವಾದರೆ ₹2 ಲಕ್ಷ ದಂಡ.






ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಈ ನಿಯಮ ಹಾಗೂ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.ನಿಯಮಾವಳಿಗಳ ಪರಿಶೀಲನೆಯ ನಂತರವಷ್ಟೇ ಪರವಾನಗಿ ನವೀಕರಿಸಲಾಗುವುದು. ನವೀಕರಿಸಿದ ಪ್ರಮಾಣಪತ್ರವನ್ನು ಕ್ಲಿನಿಕ್‌ನ ಪ್ರಮುಖ ಸ್ಥಳದಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು.

error: Content is protected !!
Scroll to Top