(ನ್ಯೂಸ್ ಕಡಬ) newskadaba.com ಜೂ.26: ಕರಾವಳಿಯ ಇತಿಹಾಸದಲ್ಲೇ ಅತ್ಯಂತ ಅದ್ಧೂರಿ ಕಾರ್ಪೊರೇಟ್ ಕಾರ್ಯಕ್ರಮವೊಂದಕ್ಕೆ ಮಂಗಳೂರು ನಗರ ಸಾಕ್ಷಿಯಾಗಿದೆ. ಅಡ್ಯಾರ್ ಗಾರ್ಡನ್ನಲ್ಲಿ ‘ರೋಹನ್ ಕಾರ್ಪೊರೇಶನ್’ ಆಯೋಜಿಸಿದ್ದ “ಆನ್ ಈವ್ನಿಂಗ್ ವಿತ್ ಶಾರುಖ್ ಖಾನ್” ಸಮಾರಂಭದಲ್ಲಿ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಈ ಹೈ-ಪ್ರೊಫೈಲ್ ಕಾರ್ಯಕ್ರಮದಲ್ಲಿ ಉದ್ಯಮ ಕ್ಷೇತ್ರದ ದಿಗ್ಗಜರು, ಗಣ್ಯರು ಮತ್ತು ವಿಐಪಿಗಳು ಪಾಲ್ಗೊಂಡಿದ್ದರು.
ರೋಹನ್ ಕಾರ್ಪೊರೇಶನ್ನ ಅತ್ಯಂತ ಐಷಾರಾಮಿ ಸಮುದ್ರ ತೀರದ ವಸತಿ ಯೋಜನೆ ‘ರೋಹನ್ ಮರೀನಾ ಒನ್’ ಅನ್ನು ಈ ವೇದಿಕೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಯಿತು.ಕರಾವಳಿಯ ಪ್ರತಿಷ್ಠಿತ ಕಲಾವಿದರ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ, ‘ಇಂಡಿಯನ್ ಐಡಲ್’ ವಿಜೇತ ಸಲ್ಮಾನ್ ಅಲಿ ಅವರ ಅದ್ಭುತ ಗಾಯನವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಶಾರುಖ್ ಖಾನ್ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೇರೊ ಮತ್ತು ನಿರ್ದೇಶಕ ಡಿಯೋನ್ ಮೊಂತೇರೊ ಅವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅವರು ಮಹತ್ವಾಕಾಂಕ್ಷೆ, ನಾಯಕತ್ವ ಹಾಗೂ ಕಠಿಣ ಪರಿಶ್ರಮದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.1994 ರಲ್ಲಿ ಸ್ಥಾಪನೆಯಾದ ರೋಹನ್ ಕಾರ್ಪೊರೇಶನ್ ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾಗಿದ್ದು, ಮೂರು ದಶಕಗಳ ಅವಧಿಯಲ್ಲಿ 25 ಕ್ಕೂ ಹೆಚ್ಚು ಯಶಸ್ವಿ ಯೋಜನೆಗಳನ್ನು ಪೂರ್ಣಗೊಳಿಸಿದೆ.









