ಪ್ರಸಕ್ತ ಸಾಲಿನಿಂದಲೇ ಜಾರಿ: 9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ‘ತುರ್ತು ಪರಿಸ್ಥಿತಿ’ ಪಾಠ!



(ನ್ಯೂಸ್‌ ಕಡಬ) newskadaba.com,  ಜೂ.25 : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (NCERT) 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಕುರಿತಾದ ಪ್ರತ್ಯೇಕ ಅಧ್ಯಾಯವನ್ನು ಮೊದಲ ಬಾರಿಗೆ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಅಧಿಕೃತವಾಗಿ ಸೇರಿಸಿದೆ.ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಪರಿಷ್ಕರಿಸಲಾದ ಈ ಪಠ್ಯಪುಸ್ತಕಗಳು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ (2026-27) ದೇಶಾದ್ಯಂತ ಜಾರಿಗೆ ಬರಲಿವೆ.







‘ಪ್ರಜಾಪ್ರಭುತ್ವ ರಾಜಕೀಯ-1’ ಪಠ್ಯಪುಸ್ತಕದ 5ನೇ ಅಧ್ಯಾಯದಲ್ಲಿ ತುರ್ತು ಪರಿಸ್ಥಿತಿಯನ್ನು ಪ್ರಜಾಪ್ರಭುತ್ವಕ್ಕೆ ಎದುರಾದ ಸವಾಲು’ ಎಂದು ವ್ಯಾಖ್ಯಾನಿಸಲಾಗಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ 21 ತಿಂಗಳ ತುರ್ತು ಪರಿಸ್ಥಿತಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಹರಣ, ಮಾಧ್ಯಮಗಳ ಮೇಲಿನ ಸೆನ್ಸಾರ್‌ಶಿಪ್, ವಿರೋಧ ಪಕ್ಷದ ನಾಯಕರ ಬಂಧನ ಹಾಗೂ ಕಾರ್ಯಾಂಗ-ನ್ಯಾಯಾಂಗದ ನಡುವಿನ ಸಂಘರ್ಷಗಳನ್ನು ಇದರಲ್ಲಿ ವಿವರಿಸಲಾಗಿದೆ.






ಇದುವರೆಗೆ ಕೇವಲ 12ನೇ ತರಗತಿಯಲ್ಲಿದ್ದ ಈ ವಿಷಯವನ್ನು, ವಿದ್ಯಾರ್ಥಿಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಮಹತ್ವ ಹಾಗೂ ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಉದ್ದೇಶದಿಂದ 9ನೇ ತರಗತಿಗೆ ಸೇರಿಸಲಾಗಿದೆ.

error: Content is protected !!
Scroll to Top