“ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಘಾಟ್ ರಸ್ತೆಯಲ್ಲಿ ರಾತ್ರಿ ಜರ್ನಿ ಮಾಡ್ತಿದ್ದೀರಾ? ಹಾಗಾದ್ರೆ ಹುಷಾರ್!



(ನ್ಯೂಸ್‌ ಕಡಬ) newskadaba.com,  ಜೂ.17 :ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಘಾಟ್ ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುವ ಕೆಲವು ಪ್ರಯಾಣಿಕರಿಗೆ ವಿಚಿತ್ರ ಅನುಭವಗಳಾಗಿರುವ ವರದಿಗಳು ಕೇಳಿಬಂದಿವೆ.ಬೆಂಗಳೂರು ಮೂಲದ ಕುಟುಂಬವೊಂದು ರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಎದುರುಗಡೆ ವಾಹನವೊಂದರ ಹೆಡ್‌ಲೈಟ್‌ನಂತಹ ಬೆಳಕು ಅಸಹಜವಾಗಿ ಚಲಿಸಿ ದಿಢೀರ್ ಕಣ್ಮರೆಯಾದ ಘಟನೆ ನಡೆದಿದೆ.







ಧರ್ಮಸ್ಥಳದಿಂದ ಹಿಂತಿರುಗುತ್ತಿದ್ದ ಪ್ರಯಾಣಿಕರೊಬ್ಬರು ರಾತ್ರಿ ವೇಳೆ ನಿರ್ಜನ ಪ್ರದೇಶದಲ್ಲಿ ಚಹಾ ಕುಡಿಯಲು ನಿಂತಾಗ, ನಿಗೂಢ ಆಕೃತಿಯೊಂದು ಕಾಣಿಸಿಕೊಂಡು ತಕ್ಷಣ ಮಾಯವಾದ ಅನುಭವ ಹಂಚಿಕೊಂಡಿದ್ದಾರೆ. ಬಸ್ ಸಿಬ್ಬಂದಿ ಕೂಡ ಇಂತಹ ಕಥೆಗಳು ಈ ಮಾರ್ಗದಲ್ಲಿ ಸಾಮಾನ್ಯ ಎಂದು ಹೇಳಿದ್ದಾರೆ.ಸ್ಥಳೀಯ ನಿವಾಸಿಗಳ ಪ್ರಕಾರ ಈ ರಸ್ತೆ ಸಂಪೂರ್ಣ ಸುರಕ್ಷಿತವಾಗಿದೆ.






ದಟ್ಟವಾದ ಕಾಡು, ಕಡಿದಾದ ಘಾಟ್ ರಸ್ತೆ, ರಾತ್ರಿಯ ಮಂಜು ಮತ್ತು ಕಡಿಮೆ ಬೆಳಕು.ನಿರಂತರ ಚಾಲನೆಯಿಂದ ಉಂಟಾಗುವ ದಣಿವು, ಮಾನಸಿಕ ಒತ್ತಡ ಮತ್ತು ಕತ್ತಲೆಯ ಭಯದಿಂದಾಗಿ ಪರಿಸರದಲ್ಲಾಗುವ ಬದಲಾವಣೆಗಳು ಮನುಷ್ಯನಿಗೆ ಭ್ರಮೆ ಮೂಡಿಸುತ್ತವೆ.

error: Content is protected !!
Scroll to Top