ಎದೆ ಉರಿ ಎಂದಿದ್ದ 4 ವರ್ಷದ ಮಗು ಸಾವು: ಹೃದಯಾಘಾತದ ಶಂಕೆ?



(ನ್ಯೂಸ್‌ ಕಡಬ) newskadaba.com,  ಜೂ.17 :ಹಿರಿಯೂರಿನಲ್ಲಿ 4 ವರ್ಷದ ಪುಟ್ಟ ಬಾಲಕನೊಬ್ಬ ಹಠಾತ್ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಆರಂಭದಲ್ಲಿ ಬಾಲಕ ವೈಷ್ಣವ್ ಪೋಷಕರಿಗೆ “ಎದೆ ಭಾಗದಲ್ಲಿ ಉರಿಯಾಗುತ್ತಿದೆ” ಎಂದು ತಿಳಿಸಿದ್ದಾನೆ. ಇದನ್ನು ಸಾಮಾನ್ಯ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಭಾವಿಸಿದ ಪೋಷಕರು ಮನೆಮದ್ದು ನೀಡಿದ್ದರು.







ಆದರೆ ಕೆಲವೇ ಸಮಯದ ಬಳಿಕ ಬಾಲಕನ ಸ್ಥಿತಿ ಗಂಭೀರಗೊಂಡಿದೆ. ತಕ್ಷಣ ಆತಂಕಗೊಂಡ ಪೋಷಕರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮಗು ಕೊನೆಯುಸಿರೆಳೆದಿದೆ.






ಬಾಲಕನ ಹಠಾತ್ ಸಾವಿಗೆ ಹೃದಯಾಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಹೆತ್ತವರ ಕಣ್ಮುಂದೆಯೇ ಮಗು ಸಾವನ್ನಪ್ಪಿರುವುದು ಇಡೀ ಕುಟುಂಬ ಮತ್ತು ಸ್ಥಳೀಯರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ವೈದ್ಯಕೀಯ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ.

error: Content is protected !!
Scroll to Top