(ನ್ಯೂಸ್ ಕಡಬ) newskadaba.com, ಜೂ.17 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿದ ನಂತರ ಮರಣ ಹೊಂದಿದ 3,477 ಫಲಾನುಭವಿಗಳ ಖಾತೆಗೆ ನಿಯಮಬಾಹಿರವಾಗಿ ಜಮೆಯಾಗಿರುವ 3.34 ಕೋಟಿ ರೂ. ಸಹಾಯಧನವನ್ನು ತಕ್ಷಣವೇ ಸರ್ಕಾರಕ್ಕೆ ಮರಳಿ ಪಡೆಯಲು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮೃತರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ಶೀಘ್ರವೇ ಕೈಬಿಡಲು ಆದೇಶಿಸಲಾಗಿದೆ.
ಪ್ರಯಾಣಿಕರಿಗೆ ಗೌರವ ನೀಡುವುದರ ಬಗ್ಗೆ ಮತ್ತು ಹೊಸದಾಗಿ ನೇಮಕವಾಗುವ ಬಸ್ ಚಾಲಕರು/ಸಿಬ್ಬಂದಿಗೆ ಸಾರ್ವಜನಿಕ ಸೇವೆಯ ಕುರಿತು ತರಬೇತಿ ನೀಡಲು ತೀರ್ಮಾನಿಸಲಾಯಿತು.









