(ನ್ಯೂಸ್ ಕಡಬ) newskadaba.com, ಜೂ.16 ಬೆಂಗಳೂರು ಪೊಲೀಸ್ ಮತ್ತು ಕಸ್ಟಮ್ಸ್ ಅಧಿಕಾರಿಗಳು ನಗರದ ಮೂರು ಬೇರೆ ಬೇರೆ ಕಡೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಮತ್ತು ಕೊಕೇನ್ ವಶಪಡಿಸಿಕೊಂಡಿದ್ದಾರೆ.
ಇಮ್ರಾನ್ ಪಾಷಾ, ಉಗಾಂಡಾ ಮೂಲದ ಮಹಿಳೆ ಜನತ್ ಮತ್ತು ವಾಹಬ್ ಎಲ್ವಿಸ್ ಯುನಿಸ್ ಎಂಬುವವರನ್ನು ಬಂಧಿಸಲಾಗಿದೆ.ಬ್ಯಾಂಕಾಕ್‌ನಿಂದ ಲಗೇಜ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹2.77 ಕೋಟಿ ಮೌಲ್ಯದ 7.92 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಿಂದ ಬೆಂಗಳೂರಿಗೆ ಡ್ರಗ್ಸ್ ತರುತ್ತಿದ್ದ ಹಳೇ ಆರೋಪಿ ಇಮ್ರಾನ್ ಪಾಷಾನನ್ನು ಬಂಧಿಸಿ, ಆತನಿಂದ ₹2.20 ಕೋಟಿ ಮೌಲ್ಯದ (3 ಕೆಜಿ 180 ಗ್ರಾಂ) ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದು ಯಶವಂತಪುರ ಭಾಗದಲ್ಲಿ ಡ್ರಗ್ಸ್ ಮಾರುತ್ತಿದ್ದ ಉಗಾಂಡಾ ಮಹಿಳೆಯನ್ನು ಸಿಸಿಬಿ ಬಂಧಿಸಿದೆ. ಈಕೆಯಿಂದ ₹70.50 ಲಕ್ಷ ಮೌಲ್ಯದ 130 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ. (ಈಕೆ ಈ ಹಿಂದೆ ದೆಹಲಿಯಲ್ಲೂ 5 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಳು).ಈ ಮಾದಕ ದ್ರವ್ಯ ಜಾಲದ ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯ ಸಂಪರ್ಕಗಳ ಬೆನ್ನುಬಿದ್ದಿರುವ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.heADLINES













