ರಕ್ಷಣಾ ವಲಯದಲ್ಲಿ ಹೊಸ ಇತಿಹಾಸ ದೇಶಿ ನಿರ್ಮಿತ ಪ್ರಥಮ C-295 ವಿಮಾನದ ಯಶಸ್ವಿ ಪರೀಕ್ಷಾರ್ಥ ಹಾರಾಟ



(ನ್ಯೂಸ್ಕಡಬ) newskadaba.com, ಜೂ.11 : ಭಾರತದಲ್ಲೇ ತಯಾರಿಸಲಾದ ಮೊದಲ C-295 ಮಿಲಿಟರಿ ಸಾರಿಗೆ ವಿಮಾನ ತನ್ನ ಚೊಚ್ಚಲ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ‘ಆತ್ಮನಿರ್ಭರ ಭಾರತ’ ಯೋಜನೆಗೆ ಸಿಕ್ಕ ದೊಡ್ಡ ಯಶಸ್ಸು ಎಂದು ಭಾರತೀಯ ವಾಯುಪಡೆ ಶ್ಲಾಘಿಸಿದೆ.







ಒಟ್ಟು ₹21,935 ಕೋಟಿ ವೆಚ್ಚದ ಈ ರಕ್ಷಣಾ ಒಪ್ಪಂದದಲ್ಲಿ ಒಟ್ಟು 56 ವಿಮಾನಗಳನ್ನು ಖರೀದಿಸಲಾಗುತ್ತಿದೆ. ಇದರಲ್ಲಿ ಮೊದಲ 16 ವಿಮಾನಗಳು ಸ್ಪೇನ್‌ನಿಂದ ಸಿದ್ಧ ರೂಪದಲ್ಲಿ ಬರಲಿದ್ದು, ಬಾಕಿ 40 ವಿಮಾನಗಳನ್ನು ಗುಜರಾತ್‌ನ ವಡೋದರಾದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಏರ್‌ಬಸ್ ಸಹಭಾಗಿತ್ವದಲ್ಲಿ ಭಾರತದಲ್ಲೇ ನಿರ್ಮಿಸಲಾಗುತ್ತಿದೆ.






ಈ ಅತ್ಯಾಧುನಿಕ ವಿಮಾನಗಳು ಭಾರತೀಯ ವಾಯುಪಡೆಯ ಹಳೆಯ ‘ಅವ್ರೋ’ ವಿಮಾನಗಳ ಸ್ಥಾನವನ್ನು ತುಂಬಲಿವೆ. ಇವು ಸೈನಿಕರು, ಯುದ್ಧೋಪಕರಣಗಳು ಹಾಗೂ ರಕ್ಷಣಾ ಸಾಮಗ್ರಿಗಳ ವೇಗದ ಸಾಗಣೆಗೆ ನೆರವಾಗಲಿವೆ.

error: Content is protected !!
Scroll to Top