384 ಡ್ರೈವಿಂಗ್ ಲೈಸೆನ್ಸ್ ಗಳ ಅಮಾನತು



(ನ್ಯೂಸ್ ಕಡಬ) newskadaba.com ಜೂ. 10. ಪೊಲೀಸ್ ಇಲಾಖೆ ಹಾಗೂ ಆರ್.ಟಿ.ಓ.ಯಿಂದ ತಪಾಸಣೆ ನಡೆಸಿ, 2025ರಿಂದ 2026 ಏಪ್ರಿಲ್ 30ರ ವರೆಗೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಬಗ್ಗೆ 1855 ಪ್ರಕರಣಗಳು, ಶಾಲಾ ವಾಹನಗಳಲ್ಲಿ ಮಿತಿಮೀರಿ ಮಕ್ಕಳ ಸಾಗಿಸಿರುವ 99 ಪ್ರಕರಣಗಳು, ಟಿಂಟೆಡ್ ಗ್ಲಾಸ್ ಅಳವಡಿಸಿದ 12 ಪ್ರಕರಣಗಳು, ಕರ್ಕಶ ಹಾರ್ನ್ ವಿರುದ್ಧ 201 ಕೇಸ್‍ ಗಳು ಹಾಗೂ ಮಿತಿಮೀರಿದ ಭಾರ ಸಾಗಿಸಿದ 184 ಪ್ರಕರಣಗಳನ್ನು ದಾಖಲಿಸಿ ದಂಡವ ವಸೂಲಿ ಮಾಡಲಾಗಿದೆ. ಅದೇ ರೀತಿ 2025ರಿಂದ ಇದುವರೆಗೆ ಜಿಲ್ಲೆಯಲ್ಲಿ 433 ಮಾರಣಾಂತಿಕ ಅಪಘಾತ ಪ್ರಕರಣಗಳು ವರದಿಯಾಗಿದ್ದು, ಈ ಸಂಬಂಧ  384 ಡ್ರೈವಿಂಗ್ ಲೈಸೆನ್ಸ್‍ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರ ರಾಘವೇಂದ್ರ ನಾಯ್ಕ್, ಮಂಗಳೂರು ನಗರ ವ್ಯಾಪ್ತಿಯ ಸಂಚಾರಿ ಪೊಲೀಸ್ ಇನ್ಸ್‍ ಪೆಕ್ಟರ್‍ಗಳು ಉಪಸ್ಥಿತರಿದ್ದರು.







error: Content is protected !!
Scroll to Top