ಆಂಟಿಬಯೋಟಿಕ್ ನೇರ ಖರೀದಿಗೆ ಬ್ರೇಕ್: ರಾಜ್ಯ ಸರ್ಕಾರದಿಂದ ಹೊಸ ನೀತಿ ಜಾರಿ



(ನ್ಯೂಸ್‌ ಕಡಬ) newskadaba.com, ಜೂ.10 ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್‌ಗಳಲ್ಲಿ ನೇರವಾಗಿ ಆಂಟಿಬಯೋಟಿಕ್ ಖರೀದಿಸುವುದನ್ನು ತಡೆಯಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿಯಮ ತರುತ್ತಿದೆ.







ರಾಷ್ಟ್ರೀಯ ಮಾರ್ಗಸೂಚಿ ಅನ್ವಯ ರಾಜ್ಯಕ್ಕೆ ಪ್ರತ್ಯೇಕ ನೀತಿ ರೂಪಿಸಲು ತಜ್ಞರ ಸಮಿತಿ ರಚಿಸಲಾಗಿದ್ದು, ವರದಿ ಬಂದ ಬಳಿಕ ಹೊಸ ನಿಯಮಾವಳಿ ಜಾರಿಯಾಗಲಿದೆ.ರೋಗಾಣುಗಳು ಔಷಧಿಗಳಿಗೆ ಬಗ್ಗದಂತೆ ಪ್ರತಿರೋಧ ಬೆಳೆಸಿಕೊಳ್ಳುತ್ತಿರುವುದನ್ನು ಪತ್ತೆಹಚ್ಚಲು ರಾಜ್ಯಾದ್ಯಂತ ಮಾದರಿ ಸಂಗ್ರಹಿಸಿ ಮ್ಯಾಪಿಂಗ್ ಮಾಡಲು ಇಲಾಖೆ ನಿರ್ಧರಿಸಿದೆ.






ಸಣ್ಣಪುಟ್ಟ ಜ್ವರಕ್ಕೆ ಹೈ-ಲೆವೆಲ್ ಮಾತ್ರೆ ತೆಗೆದುಕೊಳ್ಳುವುದು ಹಾಗೂ ಆಂಟಿಬಯೋಟಿಕ್ ನೀಡಲಾದ ಪಶು-ಪಕ್ಷಿಗಳ ಮಾಂಸ, ಹಾಲು ಸೇವನೆಯಿಂದಾಗಿ ರೋಗಾಣುಗಳು ಔಷಧಿಗಳನ್ನು ಸುಲಭವಾಗಿ ಅರಗಿಸಿಕೊಳ್ಳುತ್ತಿವೆ.

error: Content is protected !!
Scroll to Top