ತೆಂಗಿನಕಾಯಿ ದರದಲ್ಲಿ ಭಾರಿ ಕುಸಿತ ಗ್ರಾಹಕರಿಗೆ ನಿರಾಳ, ಕೆರಾಫೆಡ್‌ನಿಂದ ‘ಕೇರಾ’ ಎಣ್ಣೆ ಬೆಲೆಯೂ ಕಡಿತ



(ನ್ಯೂಸ್‌ ಕಡಬ) newskadaba.com,  ಜೂ.10 : ಭಾರಿ ಬೇಡಿಕೆಯಿಂದಾಗಿ 82 ರೂಪಾಯಿಗೆ ತಲುಪಿದ್ದ ತೆಂಗಿನಕಾಯಿ ಬೆಲೆ ಇದೀಗ 40 ರೂಪಾಯಿಗೆ ಕುಸಿದಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಉತ್ಪಾದನೆ, ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ರಫ್ತು ಕುಸಿತ ಹಾಗೂ ನೆರೆರಾಜ್ಯಗಳ ಹರಿವು ಈ ಇಳಿಕೆಗೆ ಮುಖ್ಯ ಕಾರಣ.







ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕೆರಾಫೆಡ್ ಸಂಸ್ಥೆಯು ಸಾರ್ವಜನಿಕರಿಗಾಗಿ ತನ್ನ ಕೇರಾ’ ಬ್ರ್ಯಾಂಡ್ ತೆಂಗಿನ ಎಣ್ಣೆಯ ದರವನ್ನು ಕಡಿತಗೊಳಿಸಿದೆ:






1 ಲೀಟರ್ ಪ್ಯಾಕ್: 375 ರೂ.ನಿಂದ 332 ರೂ.ಗೆ ಇಳಿಕೆ.

900 ಮಿಲಿ ಪ್ಯಾಕ್: 338 ರೂ.ನಿಂದ 299 ರೂ.ಗೆ ಇಳಿಕೆ.

500 ಮಿಲಿ ಪ್ಯಾಕ್: 189 ರೂ.ನಿಂದ 167 ರೂ.ಗೆ ಇಳಿಕೆ.

ತೆಂಗಿನಕಾಯಿ (ಚಿಲ್ಲರೆ ಮಾರುಕಟ್ಟೆ ): 41ರೂ.
ಸಿಪ್ಪೆ ಸುಲಿಯದ ಒಂದು ಕಾಯಿ: 13ರೂ.
ತೆಂಗಿನಕಾಯಿ ಚಿಪ್ಪು (ಗೆರಟೆ): 32ರೂ.
ಕೊಬ್ಬರಿ: 130ರೂ.
ತೆಂಗಿನ ಎಣ್ಣೆ: 300ರೂ.

error: Content is protected !!
Scroll to Top