ಶ್ರೀ ಕ್ಷೇತ್ರ ಕುಕ್ಕಾಜೆಯಿಂದ ನೂರಾರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ



(ನ್ಯೂಸ್‌ ಕಡಬ) newskadaba.com,  ಜೂ.10 ಬಂಟ್ವಾಳ: ಶ್ರೀ ಕ್ಷೇತ್ರ ಕುಕ್ಕಾಜೆಯಿಂದ ಉಚಿತ ಪುಸ್ತಕ ವಿತರಣೆ







ಬಂಟ್ವಾಳ: ಶ್ರೀ ಕ್ಷೇತ್ರ ಕುಕ್ಕಾಜೆಯ ವಾರ್ಷಿಕ ಶೈಕ್ಷಣಿಕ ಸಹಾಯ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ನೂರಾರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಶ್ರೀ ಕೃಷ್ಣ ಗುರೂಜಿಯವರು ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ತಮ್ಮ ದೀರ್ಘಕಾಲದ ಸಂಪ್ರದಾಯದಂತೆ ಈ ಪುಸ್ತಕಗಳನ್ನು ವಿತರಿಸಿದರು.






ಕಾರ್ಯಕ್ರಮದಲ್ಲಿ ಕ್ಷೇತ್ರದ ಮೊಕ್ತೇಸರ ಎಂ.ಕೆ. ಶ್ರೀಧರ್ ಬಾಳೆಕಲ್ಲು, ಕಲಿಕಾ ಕಲಾ ಸಂಘದ ಅಧ್ಯಕ್ಷ ನವೀನ್ ತರಿದಾಳ, ಪಶುವೈದ್ಯಾಧಿಕಾರಿ ಡಾ. ಸತೀಶ್, ಮುಖ್ಯೋಪಾಧ್ಯಾಯಿನಿಯರಾದ ಸುಧಾ ಸಂದೇಶ್, ದಯಾಮಣಿ ಹಾಗೂ ಗುರೂಜಿಯವರ ಆಪ್ತ ಸಹಾಯಕ ಪುರುಷೋತ್ತಮ ಕಾರಾಜೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!
Scroll to Top