ವಿವಾಹಪೂರ್ವ ಒಮ್ಮತದ ಲೈಂಗಿಕ ಸಂಬಂಧ ವೃತ್ತಿಜೀವನಕ್ಕೆ ಅಡ್ಡಿಯಲ್ಲ: ಸುಪ್ರೀಂ ಕೋರ್ಟ್



(ನ್ಯೂಸ್‌ ಕಡಬ) newskadaba.com,ಜೂ.09 ನವದೆಹಲಿ: ಅವಿವಾಹಿತ ವಯಸ್ಕರ ನಡುವೆ ಪರಸ್ಪರ ಒಪ್ಪಿಗೆಯಿಂದ ನಡೆಯುವ ವಿವಾಹಪೂರ್ವ ಲೈಂಗಿಕ ಸಂಬಂಧವು ಅವರ ವ್ಯಕ್ತಿತ್ವವನ್ನು ನಿರ್ಣಯಿಸಲು ಅಥವಾ ಉದ್ಯೋಗದ ಅರ್ಹತೆಯನ್ನು ಕಸಿದುಕೊಳ್ಳಲು ಆಧಾರವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.







ಸುಮಾರು 10 ವರ್ಷಗಳ ಹಿಂದಿನ ವಿವಾಹಪೂರ್ವ ಸಂಬಂಧದ ಕಾರಣ ನೀಡಿ ಕೆಲಸದಿಂದ ವಜಾಗೊಳಿಸಲಾಗಿದ್ದ ತೆಲಂಗಾಣದ ಪೊಲೀಸ್ ಕಾನ್‌ಸ್ಟೆಬಲ್ ಗಜುಲಾ ತಿರುಪತಿ ಅವರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.






ಅಧಿಕಾರಿಗಳು ಸಾಮಾಜಿಕ ಬದಲಾವಣೆಗಳನ್ನು ನಿರ್ಲಕ್ಷಿಸುವಂತಿಲ್ಲ. ವಿವಾಹಪೂರ್ವ ಸಂಬಂಧಗಳು ಇಂದಿನ ವಾಸ್ತವಗಳಾಗಿವೆ.ಮದುವೆಯಾಗದ ಇಬ್ಬರು ವಯಸ್ಕರು ಒಪ್ಪಿಗೆಯಿಂದ ದೈಹಿಕ ಸಂಬಂಧ ಹೊಂದುವುದನ್ನು ದೇಶದ ಯಾವುದೇ ಕಾನೂನು ನಿಷೇಧಿಸುವುದಿಲ್ಲ.ಒಮ್ಮತದ ಸಂಬಂಧವು ಯಾವುದೋ ಕಾರಣಕ್ಕೆ ಮದುವೆಯಲ್ಲಿ ಕೊನೆಗೊಳ್ಳದಿದ್ದರೆ ಅಥವಾ ಮುರಿದು ಬಿದ್ದರೆ, ಅದನ್ನು ವಂಚನೆ ಎಂದು ಭಾವಿಸಿ ವಯಸ್ಕರನ್ನು ಶಿಕ್ಷಿಸುವುದು ಸರಿಯಲ್ಲ.

ದೀರ್ಘಕಾಲದ ಸಂಬಂಧದಲ್ಲಿ ಮದುವೆಯ ಸುಳ್ಳು ಭರವಸೆಯ ಆರೋಪವಿದ್ದರೂ, ಅದು ಒಪ್ಪಿಗೆಯ ಆಧಾರದ ಮೇಲೆಯೇ ನಡೆದಿರುತ್ತದೆ ಎನ್ನುವ ಊಹೆ ಇರುತ್ತದೆ. ಹೀಗಾಗಿ ಇಂತಹ ಸಂಬಂಧಗಳು ವ್ಯಕ್ತಿಯ ವೃತ್ತಿಯ ಮೇಲೆ ಪರಿಣಾಮ ಬೀರಬಾರದು.

error: Content is protected !!
Scroll to Top