ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಗೆ ಬ್ರೇಕ್: ದೇಶದಲ್ಲೇ ಮೊದಲ ಬಾರಿಗೆ ‘ಎಥನಾಲ್ ಅಡುಗೆ ಸ್ಟವ್’ ಬಿಡುಗಡೆ!



(ನ್ಯೂಸ್‌ ಕಡಬ) newskadaba.com,  ಜೂ.06 ನವದೆಹಲಿ: ದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಪರ್ಯಾಯ ಮತ್ತು ಪರಿಸರಸ್ನೇಹಿ ಉಪಾಯವೊಂದನ್ನು ಪರಿಚಯಿಸಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಲ್‌ಪಿಜಿಗಿಂತ ಕಡಿಮೆ ವೆಚ್ಚದ ಎಥನಾಲ್ ಆಧಾರಿತ ಅಡುಗೆ ಸ್ಟವ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.







ಕಬ್ಬು, ಮೆಕ್ಕೆಜೋಳ ಮತ್ತು ಕೃಷಿ ಜೈವಿಕ ರಾಶಿಯಿಂದ ದೇಶೀಯವಾಗಿಯೇ ಎಥನಾಲ್ ಉತ್ಪಾದಿಸುವುದರಿಂದ, ವಿದೇಶಿ ಕಚ್ಚಾ ತೈಲ ಹಾಗೂ ಗ್ಯಾಸ್ ಆಮದಿನ ಮೇಲಿನ ಅವಲಂಬನೆ ತಪ್ಪಲಿದೆ. ಇದು ಎಲ್‌ಪಿಜಿಗಿಂತ ಗಣನೀಯವಾಗಿ ಅಗ್ಗವಾಗಲಿದೆ.






ಎಥನಾಲ್‌ಗೆ ಬೇಡಿಕೆ ಹೆಚ್ಚಾಗುವುದರಿಂದ ಜೈವಿಕ ಇಂಧನ ತಯಾರಿಕೆಗೆ ಬಳಕೆಯಾಗುವ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿದ್ದು, ರೈತರ ಆದಾಯ ಹೆಚ್ಚಲಿದೆ.ಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳಿಗೆ ಹೋಲಿಸಿದರೆ ಎಥನಾಲ್ ಸ್ವಚ್ಛವಾಗಿ ಉರಿಯುವುದರಿಂದ ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಗಿ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ. ಭಾರತದ ಭವಿಷ್ಯದ ಇಂಧನ ಕ್ಷೇತ್ರದಲ್ಲಿ ಇದು ಪ್ರಮುಖ ಹಾಗೂ ಅನಿವಾರ್ಯ ಅಂಗವಾಗಿ ಹೊರಹೊಮ್ಮಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!
Scroll to Top