(ನ್ಯೂಸ್ ಕಡಬ) newskadaba.com, ಜೂ.06 ನವದೆಹಲಿ: ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನ ಭಾರಿ ಕುಸಿತ ಕಂಡುಬಂದಿದೆ. ಇಂದು 10 ಗ್ರಾಮ್ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹3,000 ಇಳಿಕೆಯಾಗಿದೆ. ಇದರೊಂದಿಗೆ ಪ್ರತಿ ಗ್ರಾಮ್ ಬೆಲೆ ₹15,273ಕ್ಕೆ ತಲುಪಿದೆ. ಕಳೆದ ಮೇ 30ರಂದು ಇದರ ಬೆಲೆ ₹15,784 ಇತ್ತು.
ಸಾಮಾನ್ಯವಾಗಿ ಗ್ರಾಹಕರು ಖರೀದಿಸುವ 22 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲೂ ಭಾರಿ ಇಳಿಕೆಯಾಗಿದೆ. 10 ಗ್ರಾಮ್ 22 ಕ್ಯಾರಟ್ ಚಿನ್ನದ ದರದಲ್ಲಿ ಇಂದು ₹2,750 ಕಡಿತವಾಗಿದ್ದು, ಪ್ರಸ್ತುತ ಒಂದು ಗ್ರಾಮ್ ಬೆಲೆ ₹14,000 ಆಗಿದೆ.
ನಿರಂತರವಾಗಿ ಏರಿಕೆಯಾಗುತ್ತಿದ್ದ ಬಂಗಾರದ ದರದಲ್ಲಿ ಈಗ ಹಂತ ಹಂತವಾಗಿ ಇಳಿಕೆ ಕಂಡುಬರುತ್ತಿರುವುದು ಮಧ್ಯಮ ವರ್ಗದ ಗ್ರಾಹಕರಿಗೆ ದೊಡ್ಡ ನಿರಾಳತೆ ತಂದಿದೆ…..









