ಬರೀ 5 ರೂ ಗೆ ಮೀನು ಊಟ- ಬಂಗಾಳ ಸಿಎಂ ಹೊಸ ಯೋಜನೆ ಘೋಷಣೆ



(ನ್ಯೂಸ್‌ ಕಡಬ) newskadaba.com,  ಮೇ.27:  ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಮತದಾರರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಕೇವಲ 5 ರೂಪಾಯಿಗೆ ಮೀನು ಊಟ ಯೋಜನೆ ಘೋಷಿಸಿದೆ.







ಸಿಎಂ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಕೇವಲ 5 ರೂಪಾಯಿಗೆ ಮೀನ ಊಟ ನೀಡುವ ಘೋಷಣೆ ಮಾಡಿದೆ. ರಾಜ್ಯ ಸರ್ಕಾರವು ಸುಮಾರು 400 ವಿಶೇಷ ಕ್ಯಾಂಟೀನ್‌ಗಳಲ್ಲಿ ವಾರಕ್ಕೆ ಎರಡು ದಿನ ಮೀನು-ಅನ್ನ ಊಟವನ್ನು ಕೇವಲ 5 ಸಬ್ಸಿಡಿ ದರದಲ್ಲಿ ಒದಗಿಸುವ ಯೋಜನೆ ಘೋಷಿಸಲಾಗಿದೆ.






ಚುನಾವಣಾ ಪ್ರಣಾಳಿಕೆಯಲ್ಲಿರುವಂತೆ ಮಹಿಳೆಯರಿಗೆ ಪ್ರತಿ ತಿಂಗಳು 3,000 ನೀಡುವ “ಅನ್ನಪೂರ್ಣ ಯೋಜನೆ”ಗಾಗಿ ಮೇ 27ರಿಂದ ಅರ್ಜಿ ಫಾರ್ಮ್‌ಗಳನ್ನು ವಿತರಿಸಲಾಗುವುದು ಎಂದು ಮಂಗಳವಾರ ಘೋಷಿಸಿದೆ.

ನಾಡಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ನಡೆದ ಆಡಳಿತಾತ್ಮಕ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸುವೇಂದು ಅಧಿಕಾರಿ, “ಅನ್ನಪೂರ್ಣ ಯೋಜನೆಯ ಫಾರ್ಮ್‌ಗಳನ್ನು ನಾಳೆಯಿಂದ ರಾಜ್ಯ ಕಾರ್ಯಾಲಯದಿಂದ ವಿತರಿಸಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ಎಲ್ಲಾ ಭಾರತೀಯರು ಅರ್ಹರಾಗಿದ್ದಾರೆ ಎಂದು ಹೇಳಿದರು.

error: Content is protected !!
Scroll to Top