ಪದವೀಧರರಿಗೆ ಗುಡ್‌ನ್ಯೂಸ್‌; SSCಯಿಂದ 12,256 ಹುದ್ದೆಗಳಿಗೆ ಅರ್ಜಿ ಆಹ್ವಾನ



(ನ್ಯೂಸ್‌ ಕಡಬ) newskadaba.com,  ಮೇ.22: ಕೇಂದ್ರ ಸರ್ಕಾರದ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುವವರಿಗೆ ಸಿಹಿ ಸುದ್ದಿ. ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 12,256 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅಪ್ಲೈ ಮಾಡಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್‌ 22. ಅಪ್ಲೈ ಮಾಡುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.







ಉದ್ಯೋಗ ವಿವರ ಮತ್ತು ವಿದ್ಯಾರ್ಹತೆ






ಅಸಿಸ್ಟಂಟ್‌ ಆಡಿಟ್‌ ಆಫೀಸರ್‌, ಅಸಿಸ್ಟಂಟ್‌ ಸೆಕ್ಷನ್‌ ಆಫೀಸರ್‌, ಅಸಿಸ್ಟಂಟ್‌ ಸೆಕ್ಷನ್‌ ಆಫೀಸರ್‌, ಇನ್ಸ್‌ಪೆಕ್ಟರ್‌ ಆಫ್‌ ಇನ್‌ಕಂ ಟ್ಯಾಕ್ಸ್‌, ಇನ್ಸ್‌ಪೆಕ್ಟರ್‌, ಅಸಿಸ್ಟಂಟ್‌ ಎನ್‌ಫೋರ್ಸ್‌ಮೆಂಟ್‌ ಆಫೀಸರ್‌, ಸಬ್‌ ಇನ್ಸ್‌ಪೆಕ್ಟರ್‌, ಎಕ್ಸಿಕ್ಯೂಟಿವ್‌ ಅಸಿಸ್ಟಂಟ್‌, ರಿಸರ್ಚ್‌ ಅಸಿಸ್ಟಂಟ್‌, ಡಿವಿಷನಲ್‌ ಅಕೌಂಟೆಂಟ್‌, ಸಬ್‌-ಇನ್ಸ್‌ಪೆಕ್ಟರ್‌, ಜ್ಯೂನಿಯರ್‌ ಸ್ಟಾಟಿಸ್ಟಿಕಲ್‌ ಇನ್ವೆಸ್ಟಿಗೇಟರ್‌, ಆಫೀಸ್‌ ಸೂಪರಿಟೆಂಡೆಂಟ್‌, ಸಿಕ್ಷನ್‌ ಹೆಡ್‌, ಆಡಿಟರ್‌, ಅಕೌಂಟೆಂಟ್‌, ಅಕೌಂಟೆಂಟ್‌/ಜ್ಯೂನಿಯರ್‌ ಅಕೌಂಟೆಂಟ್‌, ಪೋಸ್ಟಲ್‌ ಅಸಿಸ್ಟಂಟ್‌, ಅಪ್ಪರ್‌ ಡಿವಿಷನ್‌ ಕ್ಲರ್ಕ್‌, ಸೀನಿಯರ್‌ ಅಡ್ಮಿನಿಸ್ಟೇಟಿವ್‌ ಅಸಿಸ್ಟಂಟ್‌, ಟ್ಯಾಕ್ಸ್‌ ಅಸಿಸ್ಟಂಟ್‌ ಹುದ್ದೆಗಳಿವೆ. ದೇಶದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿವಿಧ ವಿಷಯಗಳಲ್ಲಿ ಪದವಿಯನ್ನು ಪೂರ್ಣಗೊಳಿಸಿದವರು ಹಾಗೂ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 18ರಿಂದ 30 ವರ್ಷದವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ/ಮಾಜಿ ಯೋಧರು, ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಉಳಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರುಪಾಯಿ ಆನ್‌ಲೈನ್‌ ಮೂಲಕ ಪಾವತಿಸಬೇಕು ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ದೈಹಿಕ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಗಳಲ್ಲಿ ಪರೀಕ್ಷಾ ಕೇಂದ್ರವಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 25,500 ರುಪಾಯಿ-1,51,100 ರುಪಾಯಿ ಮಾಸಿಕ ವೇತನ ದೊರೆಯಲಿದೆ.

error: Content is protected !!
Scroll to Top