ರಸ್ತೆ ಅಪಘಾತದಲ್ಲಿ ಬೆಳ್ಳಾರೆ ಮೂಲದ ಸಾಫ್ಟ್‌ವೇರ್ ಉದ್ಯೋಗಿ ಸೂರಜ್ ರೈ ನಿಧನ



(ನ್ಯೂಸ್‌ ಕಡಬ) newskadaba.com,  ಮೇ.22: ಬೆಳ್ಳಾರೆ ಮೂಲದ ಹಾಗೂ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಸೂರಜ್ ರೈ (27) ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೇ 22ರಂದು ನಿಧನರಾಗಿದ್ದಾರೆ.ಮೃತ ಸೂರಜ್ ರೈ ಅವರು ಖ್ಯಾತ ಯಕ್ಷಗುರು ವಾಸುದೇವ ರೈ ಅವರ ಪುತ್ರರಾಗಿದ್ದು, ಅವರ ಅಕಾಲಿಕ ನಿಧನಕ್ಕೆ ವ್ಯಾಪಕ ಸಂತಾಪ ವ್ಯಕ್ತವಾಗಿದೆ.







ಮೇ 15ರಂದು ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಕುಣಿಗಲ್ ಸಮೀಪ ಕೋಳಿ ಸಾಗಾಟದ ವಾಹನಕ್ಕೆ ಡಿಕ್ಕಿಯಾಗಿ ಸೂರಜ್ ಅವರಿಗೆ ತಲೆಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.






ಮೃತರ ಪಾರ್ಥಿವ ಶರೀರವನ್ನು ಬೆಳ್ಳಾರೆಯ ನಿವಾಸಕ್ಕೆ ತರಲಾಗುತ್ತಿದ್ದು, ಬಳಿಕ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ….ಸೂರಜ್ ರೈ ಅವರ ನಿಧನಕ್ಕೆ ಬಂಧುಬಳಗ, ಸ್ನೇಹಿತರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ….

error: Content is protected !!
Scroll to Top