(ನ್ಯೂಸ್ ಕಡಬ) newskadaba.com,ಮೇ.19: ಬಾಲಿವುಡ್ ಸೂಪರ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಕನ್ನಡ ಸೂಪರ್ ಸ್ಟಾರ್ ಯಶ್ ಅಭಿನಯದ ರಾಮಾಯಣ ಸಿನಿಮಾ ಸದ್ಯ ಸುದ್ದಿಯಲ್ಲಿದೆ. ಈ ಸಿನಿಮಾ ಬಗ್ಗೆ ದಿನಕ್ಕೊಂದು ಅಪ್ಡೇಟ್ ಬರ್ತಾನೇ ಇದೆ. ಈ ವರ್ಷ ಬಾಲಿವುಡ್ ನ ಬಹುನಿರೀಕ್ಷಿತ ಹಾಗೂ ದೊಡ್ಡ ಬಜೆಟ್ ಚಿತ್ರಗಳಲ್ಲಿ ರಾಮಾಯಣ ಒಂದಾಗಿದೆ. ರಾಮಾಯಣ ಸಿನಿಮಾ ವೀಕ್ಷಣೆಗೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದು, ಈಗ ರಾಮಾಯಣ ಸಿನಿಮಾ ಬಗ್ಗೆ ಮತ್ತೊಂದು ಅಚ್ಚರಿ ವಿಷ್ಯ ಹೊರ ಬಿದ್ದಿದೆ.
ರಾಮಾಯಣ ಸಿನಿಮಾ ಅಂತಿಂತ ಸಿನಿಮಾ ಅಲ್ಲ. ಇದೊಂದು ದೊಡ್ಡ ಪ್ರಾಜೆಕ್ಟ್. ಈಗ ಈ ಸಿನಿಮಾ ಇತಿಹಾಸ ಸೃಷ್ಟಿಸಿದೆ. ವಿಶಿಷ್ಟ ದಾಖಲೆಯೊಂದನ್ನು ಮಾಡಿದೆ. ಈ ಚಿತ್ರಕ್ಕಾಗಿ, ತಯಾರಕರು ಇದುವರೆಗಿನ ಅತಿದೊಡ್ಡ ತಂಡವನ್ನು ಒಟ್ಟುಗೂಡಿಸಿದ್ದಾರೆ. ಈ ಸಿನಿಮಾಕ್ಕೆ 10,000 ಕ್ಕೂ ಹೆಚ್ಚು ಜನರು ಕೆಲ್ಸ ಮಾಡ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಸಿಬ್ಬಂದಿಯನ್ನು ಹೊಂದಿರುವ ಮೊದಲ ಬಾಲಿವುಡ್ ಚಿತ್ರ ಇದಾಗಲಿದೆ. ಸಿನಿಮಾ ನಿರ್ಮಾಣ ಕೆಲ್ಸ, ವಿನ್ಯಾಸ, ಶೂಟಿಂಗ್, ಆಕ್ಷನ್, ವೇಷಭೂಷಣ, ಸೆಟ್ ಸೇರಿದಂತೆ ಎಲ್ಲ ವಿಭಾಗದಲ್ಲಿ ವೈವಿಧ್ಯಮಯ ಪ್ರತಿಭಾನ್ವಿತ ವ್ಯಕ್ತಿಗಳ ಗುಂಪು ಕೆಲ್ಸ ಮಾಡ್ತಿದೆ. ಅಂತರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ನಿರಂತರ ಕೆಲ್ಸ ನಡೆಯುತ್ತಿದೆ. ಪ್ರಮುಖ ವಿದೇಶಿ ತಂತ್ರಜ್ಞರು ಸಿನಿಮಾದಲ್ಲಿ ಕೆಲ್ಸ ಮಾಡ್ತಿದ್ದಾರೆ.
ರಾಮಾಯಣ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶಿಸುತ್ತಿದ್ದಾರೆ. ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಸಿನಿಮಾ ಮೂಡಿಬರ್ತಿದೆ. ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮೊದಲ ಭಾಗ 2026 ರ ದೀಪಾವಳಿಯಲ್ಲಿ ಮತ್ತು ಎರಡನೇ ಭಾಗ 2027 ರ ದೀಪಾವಳಿಯಲ್ಲಿ ಬಿಡುಗಡೆಯಾಗಲಿದೆ. ರಣಬೀರ್ ಕಪೂರ್ ಜೊತೆ ಸಾಯಿ ಪಲ್ಲವಿ, ಯಶ್, ರವಿ ದುಬೆ, ಸನ್ನಿ ಡಿಯೋಲ್, ಅರುಣ್ ಗೋವಿಲ್ ಸೇರಿದಂತೆ ಅನೇಕ ಅದ್ಭುತ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಮಿಂಚಲಿದ್ದು, ರಾವಣನ ಪಾತ್ರಕ್ಕೆ ಯಶ್ ಜೀವತುಂಬಲಿದ್ದಾರೆ. ಸನ್ನಿ ಪಾಜಿ ಈ ಚಿತ್ರದಲ್ಲಿ ರಾಮ ಭಕ್ತ ಹನುಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಣಬೀರ್ ತಮ್ಮ ಪಾತ್ರದ ಬಗ್ಗೆ ಹೇಳಿದರು
ಇತ್ತೀಚೆಗೆ, ನ್ಯೂಯಾರ್ಕ್ನಲ್ಲಿ ‘ರಾಮ್’ ಚಿತ್ರದ ಸ್ನೀಕ್ ಪೀಕ್ ಅನ್ನು ತೋರಿಸಲಾಯಿತು, ನಂತರ ರಣಬೀರ್ ಭಗವಾನ್ ರಾಮನಂತಹ ಪಾತ್ರವನ್ನು ನಿರ್ವಹಿಸುವುದು ತನಗೆ ಒಂದು ದೊಡ್ಡ ಸೌಭಾಗ್ಯ ಎಂದು ಹೇಳಿದರು. ಒಬ್ಬ ನಟನಾಗಿ, ಪ್ರಾಮಾಣಿಕತೆಯಿಂದ ತನ್ನ ಪಾತ್ರವನ್ನು ನಿರ್ವಹಿಸುವುದು ಮತ್ತು ಪ್ರೇಕ್ಷಕರಿಗೆ ಅದನ್ನು ಅದ್ಭುತವಾಗಿ ಪ್ರಸ್ತುತಪಡಿಸುವುದು ಅವನ ಜವಾಬ್ದಾರಿಯಾಗಿದೆ.









