(ನ್ಯೂಸ್ ಕಡಬ) newskadaba.com ಮೇ. 14. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪ್ರಮಾಣ ಸಂಬಂಧ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ, 400 ಬಿಂದುಗಳ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಲಾಗಿದೆ. ಈ ಮೂಲಕ 56,432 ಹುದ್ದೆಗಳ ನೇಮಕಕ್ಕೆ ಹಾದಿ ಸುಗಮವಾಗಿದೆ.
ಈ ಕುರಿತ ವಿವರವಾದ ಪಟ್ಟಿಯನ್ನು ರಾಜ್ಯ ಸರ್ಕಾರ ಬುಧವಾರ ಬಿಡುಗಡೆ ಮಾಡಿದ್ದು, ಜತೆಗೆ ಎಸ್ಸಿ ಪ್ರವರ್ಗ ಎ, ಬಿ ಮತ್ತು ಸಿಗಳ ಒಳಮೀಸಲಾತಿ ಬಿಂದುಗಳನ್ನೂ ಗುರುತಿಸಿದೆ. ಇತ್ತೀಚೆಗೆ ಸರ್ಕಾರವು ಶೇ.15 ಎಸ್ಸಿ ಮೀಸಲಾತಿಯಲ್ಲಿ ಪ್ರವರ್ಗ ‘ಎ’ಗೆ ಶೇ. 5.25, ‘ಬಿ’ಗೆ ಶೇ. 5.25 ಮತ್ತು ‘ಸಿ’ಗೆ ಶೇ. 4.5ರಷ್ಟು ಪಾಲನ್ನು ಮೀಸಲಿರಿಸಿ ಆದೇಶ ಮಾಡಿತ್ತು.













