ಇಂದಿನ ಚಿನ್ನದ ದರ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ!

(ನ್ಯೂಸ್‌ ಕಡಬ) newskadaba.com ಮೇ. 14. ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಆಭರಣ ಖರೀದಿಸಲು ಮುಂದಾಗಿರುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಇಂದು 24 ಕ್ಯಾರೆಟ್ ಚಿನ್ನದ ದರ ₹14,880ಕ್ಕೆ ಏರಿಕೆಯಾದರೆ, ಬೆಳ್ಳಿ ದರ ರೂ. 302 ದಾಖಲಾಗಿದೆ. ಇದೇ ವೇಳೆ 18 ಕ್ಯಾರೆಟ್ ಚಿನ್ನದ ದರ ₹12,175ಕ್ಕೆ ತಲುಪಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆ, ಡಾಲರ್ ಮೌಲ್ಯ ಏರಿಕೆ ಹಾಗೂ ಬೇಡಿಕೆ ಹೆಚ್ಚಳದಿಂದ ಚಿನ್ನದ ಬೆಲೆಯಲ್ಲಿ ನಿರಂತರ ಚಲನವಲನ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ.

ಮದುವೆ ಹಾಗೂ ಶುಭಕಾರ್ಯಗಳ ಸೀಸನ್ ಹಿನ್ನೆಲೆ ಚಿನ್ನ ಖರೀದಿ ಹೆಚ್ಚಾಗುತ್ತಿರುವುದರಿಂದ ಮುಂದಿನ ದಿನಗಳಲ್ಲೂ ದರ ಏರಿಕೆಯ ಸಾಧ್ಯತೆ ಇದೆ ಎನ್ನಲಾಗಿದೆ.

Scroll to Top