(ನ್ಯೂಸ್ ಕಡಬ) newskadaba.com ಮೇ. 09. ರಸ್ತೆ ಕಾಮಗಾರಿ ಸಂದರ್ಭ ರೋಡ್ ರೋಲರ್ನ ಅಡಿಗೆ ಬಿದ್ದು ಉತ್ತರ ಭಾರತ ಮೂಲದ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಶನಿವಾರದಂದು ನಡೆದಿದೆ.
ಇಲ್ಲಿನ ಚತುಷ್ಪಥ ರಾಷ್ಟ್ರೀಯ ಕಾಮಗಾರಿಯ ಹಿನ್ನೆಲೆ ಸರ್ವೀಸ್ ರಸ್ತೆಯ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭ ರಸ್ತೆ ಬದಿ ಮಲಗಿದ್ದ ಕಾರ್ಮಿಕನ ಮೇಲೆ ರೋಡ್ ರೋಲರ್ ಚಲಿಸಿದ ಪರಿಣಾಮ ಈತ ಮೃತಪಟ್ಟಿದ್ದು, ಘಟನೆಯಿಂದ ಈತನ ದೇಹವಿಡೀ ಅಪ್ಪಚ್ಚಿಯಾಗಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.









