(ನ್ಯೂಸ್ ಕಡಬ) newskadaba.com, ಎ.06 ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ (US Iran War) 38ನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಎಲ್‌ಪಿಜಿ ಕೊರತೆ ಆತಂಕದಲ್ಲಿದ್ದ ಜನಕ್ಕೆ ಕೇಂದ್ರ ಸರ್ಕಾರ ಮತ್ತೆ ಅಭಯ ನೀಡಿದೆ. ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ ಎಂದಿರುವ ಕೇಂದ್ರ ಸರ್ಕಾರ ಮತ್ತೊಂದು ಕಡೆ ಕೊರತೆ ನೀಗಿಸಲು 5 ಕೆಜಿ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯನ್ನ ಹೆಚ್ಚಿಸಿದೆ.
ಭಾರತದಲ್ಲಿ ಎಲ್‌ಪಿಜಿ ಕೊರತೆಯಿಲ್ಲ ಸಾಕಷ್ಟು ಲಭ್ಯವಿದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. 5 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ಗಳು ಎಲ್ಲ ಏಜೆನ್ಸಿಗಳಲ್ಲೂ ಲಭ್ಯವಿದೆ. ಸೂಕ್ತ ಗುರುತಿನ ಚೀಟಿ (ID Card) ತೋರಿಸಿ ಗ್ರಾಹಕರು ಸಿಲಿಂಡರ್ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ..
6.6 ಲಕ್ಷ ಸಿಲಿಂಡರ್ ಮಾರಾಟ
ಎಲ್‌ಪಿಜಿ ಬಿಕ್ಕಟ್ಟು ಪೂರೈಸಲು 5 ಕೆಜಿ ಪೂರೈಕೆ ಹೆಚ್ಚಿಸಿದ ಬೆನ್ನಲ್ಲೇ ಇವುಗಳ ಖರೀದಿಗೂ ಜನ ಆಸಕ್ತಿ ತೋರಿದ್ದಾರೆ. ಕಳೆದ ಮಾರ್ಚ್ 23 ರಿಂದ ದೇಶದಲ್ಲಿ ಸುಮಾರು 6.6 ಲಕ್ಷ ಸಿಲಿಂಡರ್‌ಗಳು ಮಾರಾಟವಾಗಿದೆ. ಸದ್ಯ ಈ ಸಣ್ಣ ಸಿಲಿಂಡರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಜನ ಸೂಕ್ತ ದಾಖಲಾತಿ ನೀಡಿ ಗ್ಯಾಸ್ ಏಜೆನ್ಸಿಗಳಿಂದ ಖರೀದಿಸಬಹುದು ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ.
ಐಡಿ ಪ್ರೂಫ್ ಅಗತ್ಯ
5 ಕೆಜಿ ಸಿಲಿಂಡರ್ ಖರೀದಿಸಲು ಯಾವುದೇ ವಾಸಸ್ಥಳದ ಸಾಕ್ಷ್ಯ ತೋರಿಸುವ ಅಗತ್ಯವಿಲ್ಲ. ಆದ್ರೆ ಯಾವುದಾದರೂ ಒಂದು ಗುರುತಿನ ಚೀಟಿ ಮಾತ್ರ ತೋರಿಸಿ, ಸಿಲಿಂಡರ್ ಖರೀದಿ ಮಾಡಬಹುದು ಎಂದು ಸರ್ಕಾರ ಎಚ್ಚರಿಸಿದೆ.









