ಕಡಬ: ಅಮಾನುಷವಾಗಿ ಅಕ್ರಮ ಜಾನುವಾರು ಸಾಗಾಟ 18 ಜಾನುವಾರುಗಳು ವಶಕ್ಕೆ, ಓರ್ವನ ಬಂಧನ



(ನ್ಯೂಸ್ ಕಡಬ) newskadaba.com ಕಡಬ, ಎ.03. ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿರುವ ಕಡಬ ಠಾಣಾ ಪೊಲೀಸರು ಸುಮಾರು 18 ಜಾನುವಾರುಗಳನ್ನು ಅಮಾನುಷವಾಗಿ ಸಾಗಿಸಲಾಗುತ್ತಿದ್ದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ‌.





ಶುಕ್ರವಾರ ಬೆಳಗಿನ ಜಾವ ಹಾಸನದಿಂದ ಕೇರಳ ಕಡೆಗೆ ಕಂಟೇನರ್ ವಾಹನ ಒಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕಡಬದ ಕನ್ವರೆ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿದ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ನೇತೃತ್ವದ ಪೊಲೀಸರ ತಂಡ ಓರ್ವನನ್ನು ಬಂಧಿಸಿದ್ದು ಮತ್ತೋರ್ವ ಪರಾರಿಯಾಗಿದ್ದಾನೆ.
ಕಂಟೇನರ್ ನಲ್ಲಿ ಸುಮಾರು 18 ಜಾನುವಾರುಗಳನ್ನು ಅಮಾನುಷವಾಗಿ ಸಾಗಾಟ ಮಾಡಲಾಗುತ್ತಿರುವುದು ಕಂಡುಬಂದಿದೆ. ಬಂಧಿತ ಆರೋಪಿಯನ್ನು ಹೊಸೂರು ಮೂಲದ ಅಕ್ರಮ್ ಪಾಷಾ ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.






error: Content is protected !!
Scroll to Top