ವಾಹನ ಸವಾರರಿಗೆ ಬೆಲೆ ಏರಿಕೆ ಶಾಕ್: ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ದುಬಾರಿ!



(ನ್ಯೂಸ್‌ ಕಡಬ) newskadaba.com ,ಮಾ.24 ಬೆಂಗಳೂರು: ಈಗಾಗಲೇ ಇಂಧನ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ದರಗಳು ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ.







ದರ ಏರಿಕೆಯ ಹಿಂದಿನ ಕಾರಣ:






ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು  ಪ್ರತಿ ವರ್ಷದಂತೆ ಈ ಬಾರಿಯೂ ಸಗಟು ಬೆಲೆ ಸೂಚ್ಯಂಕದ ಆಧಾರದ ಮೇಲೆ ಟೋಲ್ ದರಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ. ಈ ಬಾರಿ ಶೇ 3 ರಿಂದ 5 ರಷ್ಟು ದರ ಹೆಚ್ಚಳವಾಗುವ ಸಾಧ್ಯತೆಯಿದೆ.ಹಣಕಾಸು ವರ್ಷದ ಆರಂಭದಲ್ಲೇ ಈ ಹೊಸ ದರಗಳು ಜಾರಿಗೆ ಬರಲಿದ್ದು, ಈ ಕುರಿತು ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳಲಿದೆ.

ಪ್ರಯಾಣಿಕರ ಜೇಬಿಗೆ ಕತ್ತರಿ:

ವಿಶೇಷವಾಗಿ ಬೆಂಗಳೂರಿನಿಂದ ಮೈಸೂರು, ಮಂಗಳೂರು ಹಾಗೂ ನೆರೆಯ ಕೇರಳ ರಾಜ್ಯದಂತಹ ದೂರದ ಊರುಗಳಿಗೆ ಸಂಚರಿಸುವ ವಾಹನ ಸವಾರರಿಗೆ ಈ ಏರಿಕೆ ಭಾರಿ ಹೊರೆಯಾಗಲಿದೆ. ಪ್ರಸ್ತುತ ಸಾವಿರಾರು ರೂಪಾಯಿ ಟೋಲ್ ಪಾವತಿಸುತ್ತಿರುವ ಲಾರಿ, ಬಸ್ ಹಾಗೂ ಖಾಸಗಿ ಕಾರು ಮಾಲೀಕರು ಇನ್ನು ಮುಂದೆ ತಮ್ಮ ಪ್ರಯಾಣದ ವೆಚ್ಚದಲ್ಲಿ ಗಣನೀಯ ಏರಿಕೆಯನ್ನು ಕಾಣಲಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಆತಂಕ:

ಟೋಲ್ ದರ ಏರಿಕೆಯು ಕೇವಲ ಖಾಸಗಿ ವಾಹನಗಳ ಮೇಲೆ ಮಾತ್ರವಲ್ಲದೆ, ಸರಕು ಸಾಗಾಣಿಕಾ ವಾಹನಗಳ ಮೇಲೆಯೂ ಪ್ರಭಾವ ಬೀರಲಿದೆ.

ಸಾಗಾಣಿಕಾ ವೆಚ್ಚ ಹೆಚ್ಚಾಗುವುದರಿಂದ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ಹಾಗೂ ಇತರ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

error: Content is protected !!
Scroll to Top