(ನ್ಯೂಸ್ ಕಡಬ) newskadaba.com,ಮಾ.10 ಇರಾನ್-ಇಸ್ರೇಲ್ ಅಮೆರಿಕದ ನಡುವೆ ಯುದ್ಧದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಎಫೆಕ್ಟ್ ಭಾರತದ ಮೇಲೆ ತಟ್ಟಿದೆ. ಆಟೋ ಗ್ಯಾಸ್ ದರ ದಿಢೀರ್ ಹೆಚ್ಚಳವಾಗಿದ್ದು, ಹಾವೇರಿಯಲ್ಲಿ ಆಟೋ ಚಾಲಕರ ಪರದಾಡುವಂತಾಗಿದೆ.
ಹಾವೇರಿಯ ಹಾನಗಲ್ ರಸ್ತೆಯಲ್ಲಿರುವ ಗೋ ಗ್ಯಾಸ್ ಬಂಕ್ನಲ್ಲಿ ಗ್ಯಾಸ್ ವ್ಯತ್ಯಯದ ಬ್ಯಾನರ್ ಹಾಕಲಾಗಿದೆ. ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆ ಆಟೋ ಚಾಲಕರಿಗೆ ಗ್ಯಾಸ್ ಕೊರತೆ ಸಾಧ್ಯತೆ ಇದೆ. ಸಹಕರಿಸಬೇಕು ಎನ್ನುವ ಬ್ಯಾನರ್ ಅಳವಡಿಸಿದ್ದಾರೆ.
ಕಳೆದ 15 ದಿನಗಳ ಹಿಂದೆ ಕೆಜಿ ಗ್ಯಾಸ್ ಬೆಲೆ 50 ರೂಪಾಯಿ ಇತ್ತು. ಈಗ ಕೆಜಿಗೆ ಗ್ಯಾಸ್ಗೆ 70 ರೂಪಾಯಿ ಆಗಿದೆ. ಆಟೋ ಓಡಿಸಿಕೊಂಡು ದುಡಿಮೆ ಮಾಡಿಕೊಂಡು ಜೀವನ ಮಾಡುವ ಆಟೋ ಚಾಲಕರ ಹೇಗೆ ಜೀವನ ಮಾಡೋದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರ್ಕಾರ ಮಧ್ಯಸ್ಥಿಕೆ ವಹಿಸಿ ಗ್ಯಾಸ್ ಬೆಲೆ ಕಡಿಮೆ ಮಾಡಬೇಕು. ಪ್ರಯಾಣಿಕರಿಗೆ 10 ರೂ. ಹೆಚ್ಚಿಗೆ ಹಣ ಕೇಳಿದರೆ ಜಗಳ ಮಾಡುತ್ತಾರೆ ಎಂದು ಆಟೋ ಚಾಲಕರು ಸಂಕಷ್ಟ ಹೇಳಿಕೊಂಡಿದ್ದಾರೆ.








