(ನ್ಯೂಸ್ ಕಡಬ) newskadaba.com,ಮಾ.10: ಇರಾನ್-ಇಸ್ರೇಲ್ ಹಾಗೂ ಅಮೆರಿಕ ಸಂಘರ್ಷದ ಹಿನ್ನೆಲೆ, ಜಾಗತಿಕ ಅನಿಶ್ಚಿತತೆ, ಷೇರು ಮಾರುಕಟ್ಟೆ ಕುಸಿತದ ಹಿನ್ನೆಲೆ ಚಿನ್ನ ಬೆಳ್ಳಿ ದರದಲ್ಲಿ ಭಾರಿ ಹೆಚ್ಚಳ ಆಗಿದೆ.
ಶುದ್ಧ ಚಿನ್ನದ ಇಂದಿನ ದರ?
ಮಾರ್ಚ್ 10, 2026, ಮಂಗಳವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 700 ರೂ ಏರಿಕೆ ಆಗಿ,1,62,380 ಕ್ಕೆ ಏರಿಕೆಯಾಗಿದೆ. 1 ಗ್ರಾಂ ಬೆಲೆ ಇಂದು 70 ರೂ ಹೆಚ್ಚಳ ಕಂಡಿದ್ದು, 16,238 ರೂ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 65 ರೂ ಏರಿಕೆ ಆಗಿ 14,885 ರೂ ಆಗಿದ್ದು 10 ಗ್ರಾಂ ಬೆಲೆ 1,48,850 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆ ಏರಿಕೆ
ಬೆಳ್ಳಿ ಬೆಲೆ ಇಂದು ಏರಿಕೆಯಾಗಿದ್ದು, ಕೆಜಿ ಬೆಲೆ 10 ಸಾವಿರ ಏರಿಕೆಯಾಗಿದ್ದು 2,90,000 ರೂ ದಾಖಲಾಗಿದೆ.
ಚಿನ್ನ-ಬೆಳ್ಳಿ ಬೆಲೆ ಏರಿಳಿತ
ಇರಾನ್-ಅಮೆರಿಕ ಸಂಘರ್ಷದ ಹಿನ್ನೆಲೆಯಲ್ಲಿ , ಡಾಲರ್ ಬೆಲೆ ಏರಿಳಿತ ಸೇರಿದಂತೆ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಏರುಪೇರಾಗುತ್ತಿದೆ.








