ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ► ಸಿಬಿಐ ತನಿಖೆಗೆ ನಿರಾಕರಿಸಿದ ಸುರ್ಪಿಂಕೋರ್ಟ್

(ನ್ಯೂಸ್ ಕಡಬ) newskadaba.com ದೆಹಲಿ,ಮೇ.8. ಕಥುವಾದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರದ ಹೊರಗೆ ಪಂಜಾಬ್ ನ ಪಠಾನ್ ಕೋಟ್ ಗೆ ವರ್ಗಾಯಿಸುವಂತೆ ಸೋಮವಾರದಂದು ಸುರ್ಪಿಂಕೋರ್ಟ್ ಆದೇಶ ಹೊರಡಿಸಿದೆ.

ಈ ಪ್ರಕರಣದಲ್ಲಿ ಆರೋಪಿಗಳನ್ನು ಬೆಂಬಲಿಸುವ ಸಂಗತಿಗಳು ಅಧಿಕಗೊಂಡಿದೆ ಎಂದು ಕತುವಾದಿಂದ ಪ್ರಕರಣವನ್ನು ವರ್ಗಾವಣೆ ಮಾಡಬೇಕೆಂದು ಆಸಿಫಾಳ ಕುಟುಂಬವು ಮನವಿ ಮಾಡಿತ್ತು. ಸುಪ್ರೀಂ ಕೋರ್ಟ್ ದಿನನಿತ್ಯದ ಕ್ಯಾಮರಾ ವಿಚಾರಣೆಗೆ ಆದೇಶಿಸಿದೆ ಮತ್ತು ಪ್ರಕರಣದ ಪ್ರಗತಿಗೆ ಈ ಮೇಲ್ವಿಚಾರಣೆ ಸಹಕರಿಸಲಿದೆ ಎಂದು ತಿಳಿಸಿದೆ. ನ್ಯಾಯಾಲಯವು ಜಮ್ಮು ಕಾಶ್ಮೀರ ಸರಕಾರವನ್ನು ವಿಶೇಷ ಸಾರ್ವಜನಿಕ ಅಭಿಯೋಜಕನನ್ನು ನೇಮಕ ಮಾಡಲು ಸಹ ಅನುಮತಿಸಿದೆ. ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸುರ್ಪಿಂಕೋರ್ಟ್ ನಿರಾಕರಿಸಿದೆ.

Also Read  ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಆಯಪಲ್ ಕಂಪನಿ ಸಿಇಒ ಕುಕ್..!

error: Content is protected !!
Scroll to Top