ಪಂಜ ಬಾಡಿಗೆ ಮನೆಯಲ್ಲಿದ್ದ ದಂಪತಿಗಳ ಬಂಧನ:ಪುತ್ತೂರಿನಲ್ಲಿ ದರೋಡೆ ಯತ್ನ ಪ್ರಕರಣ ಸಿ.ಸಿ ಕ್ಯಾಮೆರಾ ದಾಖಲೆ ಆಧರಿಸಿ ಆರೆಸ್ಟ್ ಮುಂಡೂರು ಮೂಲದ ಆರೋಪಿಗಳು



(ನ್ಯೂಸ್‌ ಕಡಬ) newskadaba.com,ಜ.01 ಮಂಗಳೂರು: ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎ.ವಿ. ನಾರಾಯಣ ಅವರ ಪುತ್ತೂರಿನ ಮನೆಯಲ್ಲಿ ಡಿ.17ರಂದು ಮಧ್ಯರಾತ್ರಿ ಕಳವು ಯತ್ನ ನಡೆದಿದ್ದು ಮನೆಯವರನ್ನು ಬೆದರಿಸಿ ಬೆಲೆಬಾಳುವ ಸೊತ್ತುಗಳನ್ನು ದೋಚಲು ಯತ್ನಿಸಿದ ಪ್ರಕರಣ ಸಂಬಂಧಿಸಿ ಪುರೋಹಿತ ಕೆಲಸ ಮಾಡುವ ಅರ್ಚಕ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.





ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎ.ವಿ. ನಾರಾಯಣ ಅವರ ಪುತ್ತೂರಿನ ಮನೆಯಲ್ಲಿ ಡಿ.17ರಂದು ಮಧ್ಯರಾತ್ರಿ ಕಳವು ಯತ್ನ ನಡೆದಿದ್ದು ಮನೆಯವರನ್ನು ಬೆದರಿಸಿ ಬೆಲೆಬಾಳುವ ಸೊತ್ತುಗಳನ್ನು ದೋಚಲು ಯತ್ನಿಸಿದ ಪ್ರಕರಣ ಸಂಬಂಧಿಸಿ ಪುರೋಹಿತ ಕೆಲಸ ಮಾಡುವ ಅರ್ಚಕ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಮುಡೂರು ನಿವಾಸಿ ಪ್ರಸ್ತುತ ಪಂಜದಲ್ಲಿ ಬಾಡಿಗೆ ಮನೆಯಲ್ಲಿರುವ ಕಾರ್ತಿಕ್ ರಾವ್ (31) ಮತ್ತು ಆತನ ಪತ್ನಿ ಕೆ.ಎಸ್ ಸ್ವಾತಿ ರಾವ್ (25) ಎಂಬವರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.






ತನಿಖೆ ನಡೆಸಿದ ಪೊಲೀಸರು ಆರೋಪಿ ದಂಪತಿಯನ್ನು ಮತ್ತು ಅವರು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದು ಎವಿ ನಾರಾಯಣ ಅವರ ಮನೆಯಲ್ಲಿ ವೃದ್ಧ ದಂಪತಿ ಮಾತ್ರ ಇರುವ ಬಗ್ಗೆ ಮಾಹಿತಿ ತಿಳಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೆಲೈಟ್ ಹಾಕಿ ಮನೆಯ ಒಳಗೆ ನುಗ್ಗಿದ್ದು ವೃದ್ಧ ದಂಪತಿ ಬೊಬ್ಬೆ ಹಾಕಿದ್ದರಿಂದ ಅರ್ಧದಲ್ಲಿ ಬಿಟ್ಟು ಪರಾರಿಯಾಗಿದ್ದರು.

error: Content is protected !!
Scroll to Top