ವಿದ್ಯಾರ್ಥಿಗಳು ಗುರು ಹಿರಿಯರ ಆದರ್ಶಗಳನ್ನು ಪಾಲಿಸಿದಾಗ ಯಶಸ್ಸು ಸಾಧ್ಯ : ಅನ್ಸಾರ್ ಬೆಳ್ಳಾರೆ ಜ್ಞಾನದೀಪದಲ್ಲಿ ಹದಿಹರೆಯದವರ ಸಬಲೀಕರಣ ಮತ್ತು ಪೋಷಕರ ತರಬೇತಿ



(ನ್ಯೂಸ್ ಕಡಬ) newskadaba.com,ಡಿ.29: ಮಕ್ಕಳ ವರ್ತನೆಗಳನ್ನು ಬದಲಾಯಿಸಿ ಉತ್ತಮ ಶಿಕ್ಷಣ ನೀಡುವುದು ಜವಾಬ್ದಾರಿಯುತ ಪೋಷಕರ ಹಾಗೂ ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಗಳು ತನ್ನ ಹೆತ್ತವರ ಹಾಗೂ ಗುರುಹಿರಿಯರ ಆದರ್ಶಗಳನ್ನು ಪಾಲಿಸಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕೌನ್ಸಿಲಿಂಗ್ ತಜ್ಞ, ಮನೋವಿಶ್ಲೇಷಕ ಅನ್ಸರ್ ಮುಡಿಪು ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆದ ಹದಿಹರೆಯದವರ ಸಬಲೀಕರಣ ಮತ್ತು ಪೋಷಕರ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತರಬೇತಿ ನೀಡಿದರು. ಪ್ರಸ್ತುತ ವಿದ್ಯಾರ್ಥಿಗಳಿಗೆ ಹೊಟ್ಟೆಯ ಹಸಿವಿಗಿಂತ ಜ್ಞಾನದ ಹಸಿವಿನ ಕೊರತೆ ಇದೆ. ಇದನ್ನು ನೀಗಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿರುವ ಶಿಕ್ಷಕರನ್ನು ವಿದ್ಯಾರ್ಥಿಗಳು ಯಾವತ್ತೂ ಮರೆಯಬಾರದು ಎಂದು ಅನ್ಸರ್ ಹೇಳಿದರು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರುಗಳಾದ ಲೋಕೇಶ್ ಮಠತ್ತಡ್ಕ, ವಿಜಿತಾ, ಗೀತಾ ಬಾಲಚಂದ್ರ, ರಶ್ಮಿ, ಸಿಂಚನಾ ಕೆ ಪಿ, ಯಶಸ್ವಿನಿ ಉಪಸ್ಥಿತರಿದ್ದರು. ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿಭಾಗದ ವಿದ್ಯಾರ್ಥಿಗಳು ಹಾಗೂ ಹೆತ್ತವರು ತರಬೇತಿಯಲ್ಲಿ ಭಾಗವಹಿಸಿದರು.





error: Content is protected !!
Scroll to Top