ಗ್ರಾಮೀಣ ಭಾರತದ ಸಬಲೀಕರಣಕ್ಕಾಗಿ ಉದ್ಯೋಗ ಖಾತರಿ



(ನ್ಯೂಸ್‌ ಕಡಬ) newskadaba.com,ಡಿ.23: ಸಾಮಾಜಿಕ ಲೆಕ್ಕಪರಿಶೋಧನೆ ಹಾಗೂ ಕುಂದುಕೊರತೆ ನಿವಾರಣೆಗೆ ಸಂಬಂಧಿಸಿದ ಶಾಸನ ಬದ್ಧ ಜವಾಬ್ದಾರಿಗಳನ್ನು ಬಲಪಡಿಸುವ ಮೂಲಕ, ವಿಕಸಿತ ಭಾರತ- ಜಿ ರಾಮ್ ಜಿ ವಿಧೇಯಕವು ಉದ್ಯೋಗ ಖಾತರಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತದೆ. ಬಲವರ್ಧಿತ ಹೊಣೆಗಾರಿಕೆ ಕಾರ್ಯವಿಧಾನಗಳು ಮತ್ತು ಸಮಯಕ್ಕೆ ಬದ್ಧವಾದ ಕುಂದುಕೊರತೆಗಳ ಪರಿಹಾರವು ಕೇವಲ ಮೇಲ್ನೋಟದ ವೈಶಿಷ್ಟ್ಯಗಳಲ್ಲ; ಅವು ಈ ಹಕ್ಕುಗಳನ್ನು ನೆಲಮಟ್ಟದಲ್ಲಿ ಅರ್ಥಪೂರ್ಣವಾಗಿಸುವ ಪ್ರಮುಖ ಅಂಶಗಳಾಗಿವೆ.





ಕಲ್ಯಾಣ ಸುಧಾರಣೆಗಳ ಕುರಿತಾದ ಸಾರ್ವಜನಿಕ ಚರ್ಚೆಯು ಅಗತ್ಯ ಮತ್ತು ಆರೋಗ್ಯಕರವಾದು ದಾಗಿದೆ. ‘ವಿಕಸಿತ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ (ವಿಬಿ- ಜಿ ರಾಮ್ ಜಿ) ಕುರಿತು ಕೆಲವು ವಲಯಗಳಲ್ಲಿ ವ್ಯಕ್ತವಾಗುತ್ತಿರುವ ಆತಂಕಗಳು ನ್ಯಾಯಸಮ್ಮತವಾದ ಕಾಳಜಿಯಿಂದ ಉದ್ಭವಿಸಿವೆ: ಅಂದರೆ, ಐತಿಹಾಸಿಕ ಉದ್ಯೋಗ ಖಾತರಿ ಯೋಜನೆಯಲ್ಲಿ ತರುವ ಯಾವುದೇ ಬದಲಾವಣೆಯು ಕಾರ್ಮಿಕರು ಕಷ್ಟಪಟ್ಟು ಗಳಿಸಿದ ಹಕ್ಕು ಗಳನ್ನು ದುರ್ಬಲಗೊಳಿಸಬಹುದು ಎಂಬ ಆತಂಕವದು.






ಆ ಕಾಳಜಿಯು ಗೌರವಕ್ಕೆ ಅರ್ಹವಾಗಿದೆ. ಆದರೆ, ಇದು ಕೇವಲ ಊಹೆಗಳ ಬದಲಿಗೆ ‘ವಿಕಸಿತ ಭಾರತ- ಜಿ ರಾಮ್ ಜಿ’ ವಿಧೇಯಕವು ವಾಸ್ತವವಾಗಿ ಏನನ್ನು ಒದಗಿಸುತ್ತದೆ ಎಂಬುದರ ಬಗ್ಗೆ ಎಚ್ಚರಿಕೆಯ ಓದನ್ನು ಬಯಸುತ್ತದೆ. ಈ ವಿಧೇಯಕದ ಅತ್ಯಂತ ಪ್ರಮುಖ ಲಕ್ಷಣವೆಂದರೆ, ಇದು ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ವೇತನ ಸಹಿತ ಉದ್ಯೋಗದ ಕಾನೂನು ಖಾತರಿ ಯನ್ನು ನೀಡುತ್ತದೆ.

ಅಷ್ಟೇ ಅಲ್ಲದೆ, ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಉದ್ಯೋಗ ನೀಡದಿದ್ದಲ್ಲಿ, ಈ ವಿಧೇಯಕವು ನಿರುದ್ಯೋಗ ಭತ್ಯೆಯನ್ನು ನೀಡಲು ಅವಕಾಶ ಕಲ್ಪಿಸುತ್ತದೆ. ಇದಕ್ಕಾಗಿ ‘ಎಂ-ನರೇಗಾ’ ಕಾಲದ ಹಕ್ಕು ನಿರಾಕರಣೆಯ ನಿಬಂಧನೆಗಳನ್ನು ತೆಗೆದು ಹಾಕಲಾಗಿದೆ.

error: Content is protected !!
Scroll to Top