(ನ್ಯೂಸ್ ಕಡಬ) newskadaba.com ಕಡಬ, ಡಿ.22. ಕಡಬದ JMJ ಆಸ್ಪತ್ರೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಹರ್ಷ ಮತ್ತು ಉತ್ಸಾಹದಿಂದ ಸೋಮವಾರದಂದು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೈಂಟ್ ಆನ್ಸ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ವಂ. ಫಾ. ಸುನಿಲ್ ಪ್ರವೀಣ್ ಪಿಂಟೋ ಅವರು ಕ್ರಿಸ್ಮಸ್ ಸಂದೇಶ ನೀಡಿ, ಪ್ರೀತಿ, ಸೇವೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. JMJ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಶಿಜಿ ವರ್ಗೀಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯ ಸಂಚಾಲಕರಾದ ಫಾ. ಪ್ರಕಾಶ್ ಪೌಲ್ ಡಿಸೋಜಾ, ಸಿಸ್ಟರ್ ಮೇರಿ ಕುಟ್ಟಿ,
ವೈದ್ಯರಾದ ಡಾ. ಸಿಸ್ಟರ್ ರೋಸ್ಲಿ, ಆದರ್ಶ್ ಸಂಗಾತಿ, ವಿಕ್ರಮ್ ರಾವ್ ಉಪಸ್ಥಿತರಿದ್ದರು.
ಆಸ್ಪತ್ರೆ ಆವರಣವನ್ನು ಕ್ರಿಸ್ಮಸ್ ಅಲಂಕಾರಗಳಿಂದ ಸಿಂಗರಿಸಲಾಗಿದ್ದು, ಸಂಭ್ರಮದ ವಾತಾವರಣ ಮನೆಮಾಡಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಸೇರಿ ಕ್ರಿಸ್ಮಸ್ ಕೇಕ್ ಕತ್ತರಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.








