(ನ್ಯೂಸ್ ಕಡಬ) newskadaba.com, ನ.18 : ನಂದಿನಿ ತುಪ್ಪಕ್ಕೆ ದೇಶದೆಲ್ಲೆಡೆ ಭಾರಿ ಡಿಮ್ಯಾಂಡ್ ಇದ್ದು, ಟಿಟಿಡಿ ಈ ಸಲ ಹೆಚ್ಚಿಗೆ ತುಪ್ಪವನ್ನು ಕೇಳಿದ್ದಾರೆ ಎಂದು ಸಚಿವ ಕೆ. ವೆಂಕಟೇಶ್ ಹೇಳಿದರು.
ಚಾಮರಾಜನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನಾವು ಕೂಡ 50 ರುಪಾಯಿ ಹೆಚ್ಚಿಗೆ ಮಾಡಿ ತುಪ್ಪವನ್ನು ನೀಡುತ್ತಿದ್ದೇವೆ, ಈ ಹಿಂದೆ ಹೆಚ್ಚಿಗೆ ಲಾಭ ಇರ್ಲಿಲ್ಲ ಈಗ ಸೇಲ್ಸ್ ಚೆನ್ನಾಗಿದೆ. ಕೇವಲ ನಂದಿನಿ ತುಪ್ಪಕ್ಕೆ ಅಷ್ಟೇ ಅಲ್ಲ ನಂದಿನಿ ಬ್ರಾಂಡ್ ಹಾಗೂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.












