ಪತ್ರಕರ್ತರ ಸಂಘದ ಚುನಾವಣೆ: ಜಿಲ್ಲಾ ಅಧ್ಯಕ್ಷರಾಗಿ ಬಾಬುರಾವ ಯಡ್ರಾಮಿ ಪುನರಾಯ್ಕೆ



(ನ್ಯೂಸ್ಕಡಬ) newskadaba.com,  ನ.11  ಕಲಬುರಗಿ:ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪತ್ರಕರ್ತ ಬಾಬುರಾವ ಯಡ್ರಾಮಿ ಅವರು ಪುನರಾಯ್ಕೆಯಾಗಿದ್ದಾರೆ. ಆ ಮೂಲಕ ಯಡ್ರಾಮಿ ಅವರು 4ನೇ ಬಾರಿಗೆ ಜಿಲ್ಲಾಧ್ಯಕ್ಷರಾದಂತಾಗಿದೆ.





ನಗರದ ಪತ್ರಿಕಾ ಭವನದಲ್ಲಿ ಸಂಘದ ಜಿಲ್ಲಾ ಘಟಕದ ಪ್ರಯುಕ್ತ ಭಾನುವಾರ ಮತದಾನ ನಡೆಯಿತು. ಬಾಬುರಾವ ಯಡ್ರಾಮಿ 170 ಮತ ಪಡೆದು ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಚಂದ್ರಶೇಖರ ಕೌಲಗಾ 120 ಮತಗಳನ್ನು ಪಡೆದು ಪರಾಭವಗೊಂಡರು.






185 ಮತ ಗಳಿಸಿದ ಭೀಮಾಶಂಕರ ಫಿರೋಜಾಬಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಸುರೇಶಕುಮಾರ ಡಿ.ಬಡಿಗೇರ 117 ಮತ ಪಡೆದು ಸೋಲು ಅನುಭವಿಸಿದರು.

ಜಿಲ್ಲಾ ಕಾರ್ಯಕಾರಿ ಸಮಿತಿಯ 15 ಸ್ಥಾನಗಳಿಗೆ ಡಾ.ತೀರ್ಥಕುಮಾರ ಬೆಳಕೋಟಾ, ಅಕ್ರಂ ಪಾಶಾ, ಶರಣಬಸಪ್ಪ ಜಿಡಗಾ, ರಾಚಪ್ಪಾ ಜಂಬಗಿ, ವಿಜಯಕುಮಾರ ಗಾಜರೆ, ಸೂರ್ಯಕಾಂತ ಜಮಾದಾರ, ಶಕೀಲ್ ಚೌಧರಿ, ಸುಧೀರ ಬಿರಾದಾರ, ಗುರುರಾಜ ಕುಲಕರ್ಣಿ, ವಿಜಯಕುಮಾರ ಜಿಡಗಿ, ನಾಗರಾಜ ಗದ್ದಿ ಕಾಳಗಿ, ವೀರೇಶ ಎಸ್.ಮಾಲಗಾರ, ಅವಿನಾಶ ಕೊಳ್ಳುರ, ವಿಜಯಲಕ್ಷ್ಮೀ ಎನ್., ಸಂಜೀವಕುಮಾರ ಆಯ್ಕೆಯಾದರು.ಒಟ್ಟು 25 ಸ್ಥಾನಗಳಿಗೆ 60 ಜನ ಕಣದಲ್ಲಿದ್ದರು.

error: Content is protected !!
Scroll to Top