ರಾಜ್ಯಾದ್ಯಂತ ‘ಆಪರೇಷನ್ ಬಿಪಿಎಲ್’ ಅಡಿಯಲ್ಲಿ 4.09 ಲಕ್ಷ ಬಿಪಿಎಲ್ ಕಾರ್ಡ್‌ಗಳು ರದ್ದು



(ನ್ಯೂಸ್ಕಡಬ) newskadaba.com,  ನ.10  ಬೆಂಗಳೂರು: ‘ಆಪರೇಷನ್‌ ಬಿಪಿಎಲ್‌’ ಎಂಬ ಹೆಸರಿನಡಿ ರಾಜ್ಯಾದ್ಯಂತ ಸುಮಾರು 4.09 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಸಹಸ್ರಾರು ಮಂದಿ ಬಡವರು ಪಡಿತರಕ್ಕಿಂತ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಲಾಗದೆ ತೊಂದರೆಗೊಳಗಾಗಿದ್ದಾರೆ.ಮಾನದಂಡ ಉಲ್ಲಂಘಿಸಿ ಅನರ್ಹರು ಪಡೆದಿದ್ದ ಸುಮಾರು 4.09 ಲಕ್ಷಕ್ಕೂ ಅಕ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಿ, ಅವುಗಳನ್ನು ಎಪಿಎಲ್‌ ಆಗಿ ಪರಿವರ್ತಿಸಲಾಗಿದೆ. ಈ ಮೂಲಕ ಲಕ್ಷಾಂತರ ಸದಸ್ಯರ ಹೆಸರು ಡಿಲಿಟ್‌ ಮಾಡಲಾಗಿದೆ.





ಇದು ಸರಕಾರಕ್ಕೆ ವರದಾನವಾದರೆ, ಗ್ರಾಹಕರಿಗೆ ಸಂಕಷ್ಟವಾಗಿದೆ.ಸರಕಾರದ ನಾನಾ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿರುವ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯು ತೆರಿಗೆ ಪಾವತಿದಾರರು, ಹೆಚ್ಚುವರಿ ಕೃಷಿ ಭೂಮಿ ಹೊಂದಿರುವವರೂ ಸೇರಿದಂತೆ ಹಲವು ವರ್ಗದಲ್ಲಿ ನಾನಾ ಅನರ್ಹರನ್ನು ಗುರುತಿಸಿ, ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸಿದೆ.






ಅನರ್ಹ ಪರಿತರ ಚೀಟಿ

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳ ಪೈಕಿ ನಾನಾ ಕಾರಣಗಳಿಗೆ 7.76 ಲಕ್ಷಕ್ಕೂ ಅಧಿಕ ಪಡಿತರ ಚೀಟಿಗಳು ಅನರ್ಹ ಎಂದು ಕೇಂದ್ರ ಸರಕಾರ ಗುರುತಿಸಿದೆ. ರಾಜ್ಯ ಸರಕಾರದ ‘ಕುಟುಂಬ ತಂತ್ರಾಂಶ’ದ ಪ್ರಕಾರ 13.87 ಲಕ್ಷಕ್ಕೂ ಅಧಿಕ ಅನರ್ಹ ಪಡಿತರ ಚೀಟಿಗಳಿವೆ. ಹೀಗಾಗಿ, ನಿರಂತರ ಪ್ರಕ್ರಿಯೆ ಮೂಲಕ ಇವುಗಳನ್ನು ಹಂತ- ಹಂತವಾಗಿ ರದ್ದುಪಡಿಸುವ ಕಾರ್ಯ ಮುಂದುವರಿಯಲಿದೆ ಎಂದು ಆಹಾರ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.

error: Content is protected !!
Scroll to Top